Monday, June 8, 2026
Homeತಾಜಾ ಸುದ್ದಿಮಂಗಳಸೂತ್ರವನ್ನು ನಾಯಿ ಚೈನಿಗೆ ಹೋಲಿಸಿದ ಮಹಿಳಾ ಪ್ರೊಫೆಸರ್!

ಮಂಗಳಸೂತ್ರವನ್ನು ನಾಯಿ ಚೈನಿಗೆ ಹೋಲಿಸಿದ ಮಹಿಳಾ ಪ್ರೊಫೆಸರ್!

- Advertisement -
- Advertisement -

ಪಣಜಿ: ಮಾಂಗಲ್ಯ ಸೂತ್ರ ಧರಿಸಿದವರನ್ನು ಚೈನ್ ಹಾಕಿದ ನಾಯಿಗೆ ಹೋಲಿಸಿದ ಮಹಿಳೆಯ ಮೇಲೆ ಎಫ್ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲು ಗೋವಾ ಸರ್ಕಾರ ಮುಂದಾಗಿದೆ.

ವಿ.ಎಂ. ಸಲ್ಗಾವೋಕರ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆಗಿರುವ ಶಿಲ್ಪ ಸಿಂಗ್, ಪುರುಷ ಪ್ರಧಾನ ಸಮಾಜವನ್ನು ಜರಿಯುವ ಭರದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದು, ಮಾಂಗಲ್ಯವನ್ನು ನಾಯಿಯ ಚೈನ್ ಎಂದೂ, ಇದನ್ನು ಧರಿಸಿರುವ ಮಹಿಳೆಯರು ಬಂಧನಕ್ಕೆ ಒಳಗಾಗಿರುವ ನಾಯಿಗಳೆಂದು ಹೇಳಿದ್ದರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ವಿವಾದಾತ್ಮಕ ಹೇಳಿಕೆ ನೀಡಿರುವ ಶಿಲ್ಪ ಸಿಂಗ್

ರಾಷ್ಟ್ರೀಯ ಹಿಂದೂ ಯುವ ವಾಹಿನಿ ಗೋವಾ ಘಟಕದ ರಾಜೀವ್ ಝಾ ಎಂಬವರು ಪ್ರೊಫೆಸರ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪ್ರೊಫೆಸರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!