Sunday, April 28, 2024
HomeUncategorizedರಾತ್ರೋ ರಾತ್ರಿ ಟಾಯ್ಲೆಟ್ ನ ಗ್ರಿಲ್ ಮುರಿದು ಸರ್ಕಾರಿ ಹಾಸ್ಟೆಲ್ ನಿಂದ 6 ಜನ ಅಪ್ರಾಪ್ತ...

ರಾತ್ರೋ ರಾತ್ರಿ ಟಾಯ್ಲೆಟ್ ನ ಗ್ರಿಲ್ ಮುರಿದು ಸರ್ಕಾರಿ ಹಾಸ್ಟೆಲ್ ನಿಂದ 6 ಜನ ಅಪ್ರಾಪ್ತ ಬಾಲಕಿಯರು ಎಸ್ಕೇಪ್

spot_img
- Advertisement -
- Advertisement -

ಮುಂಬೈ; ರಾತ್ರೋ ರಾತ್ರಿ ಟಾಯ್ಲೆಟ್ ನ ಗ್ರಿಲ್ ಮುರಿದು ಸರ್ಕಾರಿ ಹಾಸ್ಟೆಲ್ ನಿಂದ 6 ಜನ ಅಪ್ರಾಪ್ತ ಬಾಲಕಿಯರು ಎಸ್ಕೇಪ್ ಆಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈ ನ ಗೋವಂದಿಯಲಿರುವ ಸರ್ಕಾರಿ ಬಾಲಕಿಯರ ಹಾಸ್ಟೆಲ್ ನಿಂದ ಬಾಲಕಿಯರು ಪರಾರಿಯಾಗಿದ್ದಾರೆ.

ಬಾಲಕಿಯರು ಎಸ್ಕೇಪ್ ಆಗುವುದಕ್ಕೂ ಮುನ್ನ ಹಾಸ್ಟೆಲ್ ನ ಕಾನ್ ಸ್ಟೇಬಲ್ ರೂಂಅನ್ನು ಲಾಕ್ ಮಾಡಿ ಎಸ್ಕೇಪ್ ಆಗಿದ್ದಾರೆ.ಬಾಲಕಿಯರಿಗೆ ಪರಾರಿಯಾಗಲು ಯಾರೋ ಸಹಾಯ ಮಾಡಿರುವ ಶಂಕೆ ಇದೆ.ಈ ಕುರಿತು ಅಪರಿಚಿತ ವ್ಯಕ್ತಿಗಳ‌ ಮೇಲೆ ಕೇಸ್ ದಾಖಲಾಗಿದೆ.ಬಾಲಕಿಯರು ಬೆಳಗಿನ ಜಾವ 3-4 ರ ಮಧ್ಯೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಆರು ಬಾಲಕಿಯರು ಅಪ್ರಾಪ್ತರಾಗಿದ್ದು,ಸ್ಥಳೀಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.ಆದರೆ ಬಾಲಕಿಯರು ಈ ರೀತಿ ಹಾಸ್ಟೆಲ್ ನಿಂದ ಪರಾರಿಯಾಗಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ.ಈ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ‌‌‌‌.

- Advertisement -
spot_img

Latest News

error: Content is protected !!