Sunday, June 7, 2026
Homeಕರಾವಳಿಕಾರ್ಕಳ;ಅಚಾನಕ್ ಆಗಿ ರಸ್ತೆ ದಾಟಿದ ಯುವತಿ:ಅಪಘಾತ ತಪ್ಪಿಸಲು ಬ್ರೇಕ್ ಹಾಕಿದ ಕಾರಿಗೆ ಮತ್ತೊಂದು ಕಾರು ಡಿಕ್ಕಿ

ಕಾರ್ಕಳ;ಅಚಾನಕ್ ಆಗಿ ರಸ್ತೆ ದಾಟಿದ ಯುವತಿ:ಅಪಘಾತ ತಪ್ಪಿಸಲು ಬ್ರೇಕ್ ಹಾಕಿದ ಕಾರಿಗೆ ಮತ್ತೊಂದು ಕಾರು ಡಿಕ್ಕಿ

- Advertisement -
- Advertisement -

ಕಾರ್ಕಳ: ಕಾರು ಚಾಲಕನ ಚಾಲಕನ ಸಮಯ ಪ್ರಜ್ಞೆಯಿಂದ ರಸ್ತೆ ದಾಟುತ್ತಿದ್ದ ಯುವತಿಯೊಬ್ಬಳು ಅಪಘಾತಕ್ಕೊಳಗಾಗುವುದರಿಂದ ಪಾರಾದ ಘಟನೆ ಕಾರ್ಕಳ ತಾಲೂಕಿನ ಮಂಜರಪಲ್ಕೆ ಬಳಿ ನಡೆದಿದೆ.

ಬೆಳ್ಮಣ್ ನಿಂದ ಕಾರ್ಕಳಕ್ಕೆ ತೆರಳುವ ಮಾರ್ಗದಲ್ಲಿ ಮಂಜರಪಲ್ಕೆ ಬಳಿ ಈ ಘಟನೆ ನಡೆದಿದೆ.ಮಂಜರಪಲ್ಕೆ ಬಳಿ ಯುವತಿ ಅಚಾನಕ್ ಆಗಿ ರಸ್ತೆ ದಾಟಿದ್ದು ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಆಲ್ಟೋ ಕಾರು ಚಾಲಕ ತಕ್ಷಣಕ್ಕೆ ಬ್ರೇಕ್ ಹಾಕಿದ ಕಾರಣ ಯುವತಿ ಕಾರು ಡಿಕ್ಕಿ ಹೊಡೆಯುವುದರಿಂದ ಪಾರಾಗಿದ್ದಾಳೆ.

ಆಲ್ಟೋ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿದ ಪರಿಣಾಮ ಅಲ್ಟೋ ಕಾರಿನ ಹಿಂದೆ ಬರುತ್ತಿದ್ದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ.ಕಾರು ಡಿಕ್ಕಿ ಹೊಡೆದಿದ್ದು ಮತ್ತು ಯುವತಿ ಪಾರಾಗಿರುವ ದೃಶ್ಯ ಡಿಕ್ಕಿ ಹೊಡೆದ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!