Sunday, June 7, 2026
Homeಕರಾವಳಿವಿಟ್ಲ:ಪ್ರೀತಿಸಿ ಕೈಕೊಟ್ಟ ಪ್ರಿಯಕರ ಆರೋಪ; ಯುವಕನ ಮನೆ ಮುಂದೆ ಧರಣಿ ಕೂತ ಯುವತಿ

ವಿಟ್ಲ:ಪ್ರೀತಿಸಿ ಕೈಕೊಟ್ಟ ಪ್ರಿಯಕರ ಆರೋಪ; ಯುವಕನ ಮನೆ ಮುಂದೆ ಧರಣಿ ಕೂತ ಯುವತಿ

- Advertisement -
- Advertisement -

ವಿಟ್ಲ:ಪ್ರೀತಿಸಿ ಪ್ರಿಯಕರ ಕೈಕೊಟ್ಟಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಯುವಕನ ಮನೆ ಮುಂದೆ ಧರಣಿ ಕೂತ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ನಡೆದಿದೆ.

ಉತ್ತರ ಭಾರತದ ಜಲಂದರ್ ಮೂಲದ ಯುವತಿ ಬೆಂಗಳೂರಿನ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸಕ್ಕಿದ್ದಳು. ಅಲ್ಲಿ ಆಕೆಗೆ ಅಡ್ಯನಡ್ಕದ ಯುವಕನ ಪರಿಚಯವಾಗಿ ಪ್ರೇಮ ಬೆಳೆದಿದೆ. ಈ ವೇಳೆ ಇಬ್ಬರ ಮಧ್ಯೆ ಹಣಕಾಸಿನ ವ್ಯವಹಾರಗಳೂ ನಡೆದಿದೆ ಎನ್ನಲಾಗಿದೆ. ಬಳಿಕ ಪ್ರೀತಿಯ ನಾಟಕವಾಡಿ ಆತ ಒಂದು ಲಕ್ಷ ಪಡೆದು ವಂಚಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ‌. ಇದರಿಂದ ಆಕ್ರೋಶಗೊಂಡ ಯುವತಿ ತಿಂಗಳ ಹಿಂದಷ್ಟೇ ಪ್ರಿಯಕರನ ಹುಡುಕುತ್ತಾ ಅಡ್ಯನಡ್ಕಕ್ಕೆ ಬಂದು ಗಲಾಟೆ ಮಾಡಿದ್ದಳು. ಆ ಸಂದರ್ಭ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಆಕೆಯನ್ನು ಸಮಾಧಾನಪಡಿಸಿದ್ದಲ್ಲದೇ ಬೆಂಗಳೂರಲ್ಲಿ ಪೊಲೀಸ್ ಕಂಪ್ಲೈಂಟ್ ಕೊಡುವಂತೆ ಮನವರಿಕೆ ಮಾಡಿ ಕಳುಹಿಸಿದ್ದರು.

ದೀಗ ಮತ್ತೆ ಅದೇ ವಂಚನೆಗೊಳಗಾದ ಪ್ರಿಯತಮೆ ನಿನ್ನೆ ಸಂಜೆ ಅಡ್ಯನಡ್ಕದಲ್ಲಿರುವ ಪ್ರಿಯತಮನ ಮನೆ ಮುಂದೆ ಧರಣಿ ಕುಳಿತಿದ್ದಾಳೆ. ಜನ ಜಮಾಯಿಸುತ್ತಿದ್ದಂತೆ ಮಾಹಿತಿ ಪಡೆದ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ವಿಟ್ಲ ಠಾಣೆಗೆ ಕರೆದೊಯ್ದಿದ್ದಾರೆ.

- Advertisement -

Latest News

error: Content is protected !!