Saturday, May 11, 2024
Homeಕರಾವಳಿಬೆಳ್ತಂಗಡಿ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು; ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ...

ಬೆಳ್ತಂಗಡಿ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು; ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ

spot_img
- Advertisement -
- Advertisement -

ಬೆಳ್ತಂಗಡಿ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ  ಮುಸ್ತಫಾ ಅವರ ಮನೆಯಲ್ಲಿ ನಡೆದಿದೆ.

ಮುಸ್ತಫಾ ಅವರು ಫೆಬ್ರವರಿ 5 ರಂದು ತಮ್ಮಗೂಡ್ಸ್‌ ವಾಹನದ ಸರ್ವಿಸ್‌ ಗಾಗಿ ಚಿಕ್ಕಮಗಳೂರಿಗೆ ತೆರಳಿದ್ದರು.  ಆ ದಿನ‌ ಅಲ್ಲಿಯೇ ತಂಗಿದ್ದರು. ಅವರ ತಾಯಿ ರಾತ್ರಿ ಮನೆಗೆ ಬೀಗ ಹಾಕಿ ಹತ್ತಿರದಲ್ಲಿರುವ ಮುಸ್ತಫಾ ಅವರ ಚಿಕ್ಕಪ್ಪನ ಮನೆಗೆ ತೆರಳಿದ್ದರು. ಫೆಬ್ರವರಿ 6 ರಂದು ಬೆಳಿಗ್ಗೆ ಅವರ ತಾಯಿ ಮನೆಗೆ ಬಂದು ನೋಡಿದಾಗ ಮನೆಯ ಹಂಚು ತೆಗೆದು ಯಾರೋ ಕಳ್ಳರು ಒಳಪ್ರವೇಶಿಸಿ ರೂಮಿನ  ಕಪಾಟಿನಲ್ಲಿರಿಸಿದ್ದ ರೂ 1,71,000 ಮೌಲ್ಯದ ಚಿನ್ನಾಭರಣ ಹಾಗೂ ನಗದು ರೂ 1,20,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ  ಬೆಳ್ತಂಗಡಿ ಪೊಲೀಸ್ ಠಾಣೆಗೆ ಮುಸ್ತಫಾ ಅವರು ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!