Saturday, May 18, 2024
Homeಕರಾವಳಿಶಾಲೆ ಬಿಟ್ಟು  18 ವರ್ಷ ವರ್ಷದ ಬಳಿಕ ಎಸ್ಸೆಸೆಲ್ಸಿ ಪಾಸ್ ಮಾಡಿದ ಕಡಬದ ಯುವತಿ

ಶಾಲೆ ಬಿಟ್ಟು  18 ವರ್ಷ ವರ್ಷದ ಬಳಿಕ ಎಸ್ಸೆಸೆಲ್ಸಿ ಪಾಸ್ ಮಾಡಿದ ಕಡಬದ ಯುವತಿ

spot_img
- Advertisement -
- Advertisement -

ಕಡಬ:  ಇಲ್ಲಿನ ಕೊಂಬಾರು ಗ್ರಾಮದ ಯುವತಿಯೊಬ್ಬರು ಶಾಲೆ ಬಿಟ್ಟು ಬರೋಬ್ಬರಿ 18 ವರ್ಷದ ಬಳಿಕ ಎಸ್ಸೆಸೆಲ್ಸಿ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಕೊಂಬಾರು ಗ್ರಾಮದ ಕಟ್ಟೆ ಎಮರಡ್ಡ ಮುದ್ದಪ್ಪ ಗೌಡ ಮತ್ತು ಜಾನಕಿ ದಂಪತಿಯ ಪುತ್ರಿ 31 ವರ್ಷದ ಪುಷ್ಪಾವತಿಗೆ ಅವರು  ಕಲಿತದ್ದು 7ನೇ ತರಗತಿಯವರೆಗೆ ಮಾತ್ರ.

2004 ರಲ್ಲಿ 7ನೇ ತರಗತಿಗೆ ಓದು ನಿಲ್ಲಿಸಿದ ಪುಷ್ಪಾವತಿ ಆರ್ಥಿಕ ಸಮಸ್ಯೆಯಿಂದ ಓದು ನಿಲ್ಲಿಸಿದರು. ಬಳಿಕ ಉಡುಪಿಯ ಕಂಪನಿಯೊಂದರಲ್ಲಿ 6-7 ವರ್ಷ ಉದ್ಯೋಗದಲ್ಲಿದ್ದರು. ಓದು ನಿಲ್ಲಿಸಿ 18 ವರ್ಷದ ಬಳಿಕ ಮತ್ತೆ ಶಿಕ್ಷಣದಲ್ಲಿ ಆಸಕ್ತಿ ಮೂಡಿದ ಪುಷ್ಪಾವತಿ 2021-22ನೇ ಶೈಕ್ಷಣಿಕ ವರ್ಷದಲ್ಲಿ ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಗೆ ಸೇರಿ ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಒಂದೇ ಪ್ರಯತ್ನದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಆ ಮೂಲಕ ಮನಸ್ಸು ಮಾಡಿದ್ರೆ ಯಾವುದೂ ಅಸಾಧ್ಯವಲ್ಲ ಎಂಬುವುದನ್ನು ಪುಷ್ಪಾವತಿ ಅವರು ಸಾಧಿಸಿ ತೋರಿಸಿದ್ದಾರೆ.

- Advertisement -
spot_img

Latest News

error: Content is protected !!