Sunday, June 7, 2026
Homeಕರಾವಳಿಪುತ್ತೂರಿನಲ್ಲಿ ಬಾಲಕಿಯನ್ನು ಬಲಿ ಪಡೆದ ಡೆಂಗ್ಯೂ

ಪುತ್ತೂರಿನಲ್ಲಿ ಬಾಲಕಿಯನ್ನು ಬಲಿ ಪಡೆದ ಡೆಂಗ್ಯೂ

- Advertisement -
- Advertisement -

ಪುತ್ತೂರಿನಲ್ಲಿ ಬಾಲಕಿಯೊಬ್ಬಳು ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾಳೆ.ಪುತ್ತೂರಿನ  ಬೊಳುವಾರಿನಲ್ಲಿ ವಾಸ್ತವ್ಯವಿರುವ ಮೂಲತಃ ಸುರತ್ಕಲ್ ಕೃಷ್ಣಾಪುರ ನಿವಾಸಿ ನಾಮ್ದೇವ್ ಆಚಾರ್ಯ ಎಂಬವರ ಪುತ್ರಿ ಸಾನಿಧ್ಯ(8) ಮೃತಪಟ್ಟ ಬಾಲಕಿ.

ಜ್ವರ ಪೀಡಿತಳಾಗಿದ್ದ ಸಾನಿಧ್ಯಳನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆಕೆ ಚೇತರಿಸಿಕೊಳ್ಳದ ಹಿನ್ನಲೆ ಯಲ್ಲಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಲಾಗಿತ್ತು. ಅಲ್ಲಿ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಡೆಂಗಿ ಹಾಗೂ ನ್ಯೂಮೋನಿಯಾ ಬಾಧಿಸಿರುವುದರಿಂದ ಆಕೆ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಮೃತ ಬಾಲಕಿ ತಂದೆ ಹಾಗೂ ತಾಯಿಯನ್ನು ಅಗಲಿದ್ದಾಳೆ.

- Advertisement -

Latest News

error: Content is protected !!