Wednesday, April 16, 2025
Homeತಾಜಾ ಸುದ್ದಿಕೇರಳ: ಮದುವೆಯ ಹಿಂದಿನ ದಿನವೇ ಯುವತಿ ನೇ*ಣಿಗೆ ಶರಣು

ಕೇರಳ: ಮದುವೆಯ ಹಿಂದಿನ ದಿನವೇ ಯುವತಿ ನೇ*ಣಿಗೆ ಶರಣು

spot_img
- Advertisement -
- Advertisement -

ಕೇರಳ: ಮದುವೆಯ ಹಿಂದಿನ ದಿನವೇ ಯುವತಿ ನೇಣಿಗೆ ಶರಣಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಶೈಮಾ ಸಿನಿವರ್(18) ಮೃತ ಯುವತಿ. ಯುವತಿ ಸಾವನಪ್ಪಿದ ಬೆನ್ನಲ್ಲೇ ಆಕೆಯ ಪ್ರಿಯಕರ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


ಶೈಮಾ ಸಿನಿವರ್ ತಂದೆ ತೀರಿಕೊಂಡಿದ್ದು, ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದಳು. ಈ ನಡುವೆ ಮನೆಯ ಪಕ್ಕದಲ್ಲೇ ಇದ್ದ ಯುವಕ ಸಜೀರ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಕುಟುಂಬಸ್ಥರು ಬೇರೆ ಯುವಕನ ಜೊತೆ ಆಕೆಗೆ ವಿವಾಹವನ್ನು ನಿಗದಿಪಡಿಸಿದ್ದು, ನಿಶ್ಚಿತಾರ್ಥವೂ ನಡೆದಿತ್ತು. ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ ಶೈಮಾ ತಾನು ಸಜೀರ್ ಎಂಬಾತನನ್ನು ಪ್ರೀತಿಸುತ್ತಿದ್ದ ಬಗ್ಗೆ ಕುಟುಂಬಸ್ಥರಲ್ಲಿ ಹೇಳಿಕೊಂಡಿದ್ದಳು. ಆದರೆ ಕುಟುಂಬವು ಇದಕ್ಕೆ ನಿರಾಕರಿಸಿತ್ತು.

ಈ ಹಿನ್ನಲೆ ಮದುವೆ ಹಿಂದಿನ ದಿನ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿ ಆತ್ಮಹತ್ಯೆ ವಿಷಯ ತಿಳಿದು ಯುವತ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!