Wednesday, June 3, 2026
Homeಕರಾವಳಿಮಂಗಳೂರುಚಾರ್ಮಾಡಿ ಪೆರ್ನಾಲೆ ಕೆರೆಯ ಗೇಟ್ ವಾಲ್ ಬ್ಲಾಕ್; ನೀರು ತುಂಬಿರುವುದರಿಂದ ಕೆರೆ ಕಟ್ಟೆ ಒಡೆಯುವ ಭೀತಿ:...

ಚಾರ್ಮಾಡಿ ಪೆರ್ನಾಲೆ ಕೆರೆಯ ಗೇಟ್ ವಾಲ್ ಬ್ಲಾಕ್; ನೀರು ತುಂಬಿರುವುದರಿಂದ ಕೆರೆ ಕಟ್ಟೆ ಒಡೆಯುವ ಭೀತಿ: ಈಶ್ವರ್ ಮಲ್ಪೆ ಅವರಿಂದ ಕಾರ್ಯಾಚರಣೆ

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಪೆರ್ನಾಲೆ ಕೆರೆಯ ಗೇಟ್ ವಾಲ್ ಬ್ಲಾಕ್ ಆಗಿ ಕೆರೆಯಲ್ಲಿ ನೀರು ತುಂಬಿದೆ.27 ಎಕ್ರರೆಯಲ್ಲಿರುವ ಪರ್ನಾಲೆ ಕೆರೆಯ 26 ಅಡಿ ಆಳದಲ್ಲಿ ಗೇಟ್ ವಾಲ್  ಬ್ಲಾಕ್ ಆಗಿದ್ದು ಯಾರಿಗೂ ಓಪನ್ ಮಾಡಲು ಸಾಧ್ಯವಾಗುತ್ತಿಲ್ಲ.ಬೆಳ್ತಂಗಡಿ ಅಗ್ನಿಶಾಮಕ ದಳ ಬಂದರೂ ಮುಳುಗಲು ಸಾಧ್ಯವಾಗಿಲ್ಲ.ನೀರು ತುಂಬಿರುವುದರಿಂದ ಕೆರೆ ಕಟ್ಟೆ ಒಡೆಯುವ ಭೀತಿಯಲ್ಲಿದೆ.

ಸ್ಥಳಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ದೌಡಾಯಿಸಿದ್ದಾರೆ. ಸ್ಥಳದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ತಂಡ ಮೊಕ್ಕಂ ಹೂಡಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕೂಡ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದ್ದಾರೆ. ಧರ್ಮಸ್ಥಳ ಪೊಲೀಸರು ಕೂಡ ಸ್ಥಳದಲ್ಲಿದ್ದಾರೆ.26 ಅಡಿ ಅಳಕ್ಕೆ ಮುಳುಗಿ ಈಶ್ವರ್ ಮಲ್ಪೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!