Thursday, June 4, 2026
Homeಕರಾವಳಿಬೆಳ್ತಂಗಡಿ: ಬಿಜೆಪಿಯವರು ರೌಡಿ ಮೋರ್ಚಾ ಮಾಡೋಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ: ಮಾಜಿ ಸಚಿವ ಗಂಗಾಧರ ಗೌಡ ಆರೋಪ

ಬೆಳ್ತಂಗಡಿ: ಬಿಜೆಪಿಯವರು ರೌಡಿ ಮೋರ್ಚಾ ಮಾಡೋಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ: ಮಾಜಿ ಸಚಿವ ಗಂಗಾಧರ ಗೌಡ ಆರೋಪ

- Advertisement -
- Advertisement -

ಬೆಳ್ತಂಗಡಿ: ಬಿಜೆಪಿಯವರು ರೌಡಿ ಮೋರ್ಚಾ ಮಾಡೋಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಗಂಗಾಧರ ಗೌಡ ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ನ ಕೆಲ ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡ ವಿಚಾರವಾಗಿ ಮಾತನಾಡಿದ ಅವರು ಪಕ್ಷಾಂತರವಾಗೋದು ಅವರವರ ಇಷ್ಟ ಎಂದಿದ್ದಾರೆ. ಇದ್ರ ಜೊತೆಗೆ ಬೆಳ್ತಂಗಡಿಯ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅವರ ಅಭಿವೃದ್ಧಿ ಅಂದ್ರೆ ಏನೂ ಅನ್ನೋದನ್ನ ಬಿಜೆಪಿಯವರು ಹೇಳಲಿ. ಹೊಳೆಯಲ್ಲಿ ಮರಳು ಕದಿಯುವುದು, ಮರ ಕದಿಯುವುದು, ಕೋಮುವಾದ ಮಾಡುವುದು , 40% ಕಮಿಷನ್ ತಗಳೋದಾ.. ಅಭಿವೃದ್ಧಿಯಾ? ಶಾಸಕರು ಬೆಳ್ತಂಗಡಿಯಲ್ಲಿ ಒಂದಾದರೂ ಶಾಲೆ ಕಟ್ಟಿದ್ದಾರಾ, ಕಾಲೇಜ್ ಕಟ್ಟಿದ್ದರೆ, ಬಡವರಿಗೆ ಭೂಮಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ ಅವರು, ಬಿಜೆಪಿಯವರು ಕಾಂಗ್ರೆಸ್ ಪರಿಸ್ಥಿತಿ ಬಗ್ಗೆ ಮಾತನಾಡುತ್ತಿದ್ದಾgರೆ. ಇವರ ಪರಿಸ್ಥಿತಿ ಹೇಗಾಗಿದೆ ಗೊತ್ತಿದೆಯಾ..? ಬೆಳ್ತಂಗಡಿ ಶಾಸಕರಿಗೆ ದುಡ್ಡಿನ ಅಹಂ ಏರಿದೆ, ದುಡ್ಡಿನ ಮದ ಏರಿದೆ, ದುಡ್ಡಿನ ಮದದಿಂದ ಮಾತನಾಡುತ್ತಿದ್ದಾರೆ. ಜನರ ದುಡ್ಡನ್ನು ಲೂಟಿ ಮಾಡಿದ್ದಾರೆ, ಅದು ಅವರು ಮಾತನಾಡುತ್ತಿರುವುದಲ್ಲ. ದುಡ್ಡಿನ ಬಲ ಎಂದು ಶಾಸಕ ಹರೀಶ್ ಪೂಂಜರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

Latest News

error: Content is protected !!