Saturday, June 6, 2026
Homeಕರಾವಳಿಬೆಳ್ತಂಗಡಿ : ಗಂಗಾಧರ ಗೌಡರ ಮನೆ ಮೇಲೆ ಐಟಿ ದಾಳಿ ಪ್ರಕರಣ, ಬಂಗಾಡಿಯ ತೋಟದ ಮನೆಯಲ್ಲಿ...

ಬೆಳ್ತಂಗಡಿ : ಗಂಗಾಧರ ಗೌಡರ ಮನೆ ಮೇಲೆ ಐಟಿ ದಾಳಿ ಪ್ರಕರಣ, ಬಂಗಾಡಿಯ ತೋಟದ ಮನೆಯಲ್ಲಿ ಶೋಧ ಕಾರ್ಯ ಅಂತ್ಯ

- Advertisement -
- Advertisement -

ಬೆಳ್ತಂಗಡಿ : ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಮನೆ ಸೇರಿ ಮೂರು ಕಡೆ ಐಟಿ ಅಧಿಕಾರಿಗಳು ಇಂದು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಇದೀಗ ಒಂದು ಕಡೆಯ ಶೋಧ ಕಾರ್ಯ ಮುಕ್ತಾಯಗೊಳಿಸಿದ್ದು, ಉಳಿದ ಎರಡು ಕಡೆಯ ದಾಳಿ ಮುಂದುವರಿದಿದೆ.

ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿ ಗಂಗಾಧರ ಗೌಡರ ಮನೆ, ಇಂದಬೆಟ್ಟು ಗ್ರಾಮದ ಬಂಗಾಡಿಯ ಫಾರ್ಮ್ ಹೌಸ್, ಲಾಯಿಲದಲ್ಲಿರುವ ಪ್ರಸನ್ನ ಎಜುಕೇಶನ್ ಟ್ರಸ್ಟ್ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ವೇಳೆ ಐಟಿ ಅಧಿಕಾರಿಗಳಿಗೆ 30 ಲಕ್ಷ ಹಣ ಬೆಳ್ತಂಗಡಿಯ ಮನೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಇಂದಬೆಟ್ಟು ಗ್ರಾಮದ ಬಂಗಾಡಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಮಧ್ಯಾಹ್ನ 2:30ರವರೆಗೆ ಶೋಧ ಕಾರ್ಯ ನಡೆಸಿ ಮುಕ್ತಾಯ ಮಾಡಿದ್ದು ಅಲ್ಲಿಂದ ಪ್ರಸನ್ನ ಎಜುಕೇಶನ್ ಟ್ರಸ್ಟ್ ಗೆ ಆಗಮಿಸಿ ಕಾರ್ಯಚರಣೆ‌ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!