Thursday, June 25, 2026
Homeಕರಾವಳಿಮಂಗಳೂರುಧರ್ಮಸ್ಥಳ ಬರುಡೆ ಪ್ರಕರಣದ ಬಗ್ಗೆ ತನಿಖೆಯ ಫೈನಲ್ ರಿಪೋರ್ಟ್ ಬಂದ ಮೇಲಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು:...

ಧರ್ಮಸ್ಥಳ ಬರುಡೆ ಪ್ರಕರಣದ ಬಗ್ಗೆ ತನಿಖೆಯ ಫೈನಲ್ ರಿಪೋರ್ಟ್ ಬಂದ ಮೇಲಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು: ಮಂಗಳೂರಿನಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ

- Advertisement -
- Advertisement -

ಮಂಗಳೂರು: ಧರ್ಮಸ್ಥಳ ಬರುಡೆ ಪ್ರಕರಣದ ಬಗ್ಗೆ ತನಿಖೆಯ ಫೈನಲ್ ರಿಪೋರ್ಟ್ ಬಂದ ಮೇಲಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರಿನಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಧರ್ಮಸ್ಥಳ ಬರುಡೆ ಪ್ರಕರಣದ SIT ತನಿಖೆ ವಿಚಾರದ ಬಗ್ಗೆ ಮಾತನಾಡಿದ ಅವರು ತನಿಖೆಯ ಫೈನಲ್ ರಿಪೋರ್ಟ್ SIT ನೀಡಬೇಕಾಗಿದೆ.ಇಂಟರಿಂ ರಿಪೋರ್ಟ್ SIT ನೀಡಿದೆ ಅದರ ಬಗ್ಗೆ  ನಾನು ಈಗಾಗಲೇ ಸದನದಲ್ಲಿ ಮಾತಾಡಿದ್ದೇನೆ. SIT ಪ್ರಕರಣದ ತನಿಖೆ ಅಂತಿಮ ವರದಿ ನೀಡಬೇಕು. ಸರ್ಕಾರಕ್ಕೂ ಹಾಗೇ ನ್ಯಾಯಾಲಕ್ಕೂ ಅಂತಿಮ ವರದಿ ನೀಡಬೇಕಾಗುತ್ತೆ. ಆ ಬಳಿಕವಷ್ಟೇ ನಾವು ಅಪರಾಧಿಗಳು ಯಾರು ಅಂತ ಮುಂದಿನ ಕ್ರಮ ಏನು ಅಂತ ನಿರ್ಣಯ ತೆಗೆದು ಕೊಳ್ಳಬಹುದು. ಆದಷ್ಟು ಬೇಗ ಅಂತಿಮ ವರದಿ ನೀಡಲು ಈಗಾಗಲೇ SIT ಮುಖ್ಯಸ್ಥರಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!