Thursday, April 25, 2024
HomeUncategorizedನಾಳೆ ನೆರವೇರಲಿದೆ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ ಪತ್ನಿ ವಿಜಯಾ ನಾಯ್ಕ್ ಅಂತ್ಯಕ್ರಿಯೆ

ನಾಳೆ ನೆರವೇರಲಿದೆ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ ಪತ್ನಿ ವಿಜಯಾ ನಾಯ್ಕ್ ಅಂತ್ಯಕ್ರಿಯೆ

spot_img
- Advertisement -
- Advertisement -

ಪಣಜಿ: ಸೋಮವಾರ ಸಂಜೆ ಗೋಕರ್ಣದ ಸಮೀಪದ ಹಿಲ್ಕೂರ್ – ಹೊಸ್ಕಂಬಿ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ ರವರ ಪತ್ನಿ ವಿಜಯಾ ನಾಯ್ಕ ರವರ ಅಂತ್ಯಕ್ರಿಯೆಯು ನಾಳೆ ಪೊಂಡಾ ಸಮೀಪದ ಅಡಪೈಯಲ್ಲಿ ನಡೆಯಲಿದೆ. ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಗ್ರಾಮವಾದ ಅಡಪೈಗೆ ತರಲಾಗುವುದು.

ವಿಜಯಾ ನಾಯ್ಕ ರವರ ಪಾರ್ಥಿವ ಶರೀರವನ್ನು ಪಣಜಿ ಸಮೀಪದ ರಾಯಬಂದರ್ ಸಾಪೇಂದ್ರದಲ್ಲಿರುವ ಅವರ ನಿವಾಸದಲ್ಲಿ ಗುರುವಾರ ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಮೃತರು ತಮ್ಮ ಮೂವರು ಗಂಡುಮಕ್ಕಳಾದ ಸಿದ್ದೇಶ, ಸಾಯೀಶ್ ಮತ್ತು ಯೊಗೇಶ್, ಮತ್ತು ಕುಟುಂಬವನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!