ಮಂಗಳೂರು: ಕೊರೋನಾ ಹಾವಳಿಯಿಂದಾಗಿ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನಡೆಯುತ್ತಿರುವ ಎಲ್ಲ ಯಕ್ಷಗಾನ ಮೇಳಗಳು ಪ್ರದರ್ಶನವನ್ನು ನಿಲ್ಲಿಸಿದ್ದು, ಅಲ್ಲಿ ದುಡಿಯುವ ಕಲಾವಿದರು, ಕಾರ್ಮಿಕರಿಗೆ ಪ್ರದರ್ಶನ ಕಡಿತಗೊಂಡ ಹಿನ್ನೆಲೆಯಲ್ಲಿ ಸಂಬಳವನ್ನು ಕಡಿತಗೊಳಿಸಲಾಗಿದೆ.
ಈ ನಿರ್ಧಾರದಿಂದ ಕಂಗೆಟ್ಟಿರುವ ಆರ್ಥಿಕ ವಾಗಿ ಸ್ಥಿತಿವಂತರಲ್ಲದೆ ಕಲಾವಿದರು ಮತ್ತು ಕಾರ್ಮಿಕರು ಬದುಕು ನಡೆಸಲು ಸಾದ್ಯವಿಲ್ಲ ದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಮುಜರಾಯಿ ಇಲಾಖೆಯ ಮೊರೆ ಹೋಗಿದ್ದಾರೆ. ದೇವಾಲಯಗಳು ಮುಚ್ಚಿದ್ದರಿಂದ ಅರ್ಚಕರು, ಮತ್ತು ಸಿಬ್ಬಂದಿಗಳು ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನಡೆಯುತ್ತಿರುವ ದೇವಾಲಯಗಳ ಯಕ್ಷಗಾನ ಕಲಾವಿದರಿಗೆ , ಕಾರ್ಮಿಕರಿಗೆ, ಅರ್ಚರಿಗೆ, ಸಿಬ್ಬಂದಿಗಳಿಗೆ ಕೋವಿಡ್ 19 ಹಿನ್ನೆಲೆಯಲ್ಲಿ ಅವರ ನಿಗದಿತ ಸಂಬಳವನ್ನು ದೇವಸ್ಥಾನದ ಮೂಲಕ ಯಾವುದೇ ಕಡಿತವಿಲ್ಲದೆ ನೀಡಲು ಮುಜುರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ ಮಾಡಿದ್ದಾರೆ.