Tuesday, June 23, 2026
Homeಕರಾವಳಿಜೂನ್‌ 1 ರಿಂದ ನೇತ್ರಾವತಿ ಪೀಕ್, ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

ಜೂನ್‌ 1 ರಿಂದ ನೇತ್ರಾವತಿ ಪೀಕ್, ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

- Advertisement -
- Advertisement -

ಬೆಳ್ತಂಗಡಿ ತಾಲೂಕಿನಲ್ಲಿರುವ ಪ್ರಸಿದ್ಧ ಚಾರಣ ಸ್ಥಳಗಳು ಹಾಗೂ ಜಲಪಾತಗಳು ಜೂನ್ 1ರಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ.

ಬೇಸಿಗೆ ಕಾಲದಲ್ಲಿ ಸಂಭವಿಸಬಹುದಾದ ಕಾಳಿಚ್ಚು, ಬೆಂಕಿ ಅವಘಡಗಳ ತಡೆ ಹಾಗೂ ಹುಲಿಗಣತಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಕಳೆದ ಜನವರಿಯಿಂದ ನೇತ್ರಾವತಿ ಪೀಕ್, ಬಂಡಾಜೆ ಜಲಪಾತ ಮತ್ತು ಗಡಾಯಿಕಲ್ಲು ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿತ್ತು.

ಆದರೆ, ಪ್ರಸ್ತುತ ಮಳೆಯಿಂದಾಗಿ ನದಿ-ತೊರೆಗಳಲ್ಲಿ ಸಾಮಾನ್ಯ ಪ್ರಮಾಣದ ನೀರಿನ ಹರಿವು ಆರಂಭವಾಗಿದ್ದು, ಕಾಡ್ಗಿಚ್ಚಿನ ಭಯ ದೂರವಾಗಿರುವುದರಿಂದ ಪ್ರವಾಸಿಗರಿಗೆ ಮತ್ತೆ ಮುಕ್ತ ಅವಕಾಶ ನೀಡಲಾಗಿದೆ.

- Advertisement -

Latest News

error: Content is protected !!