Friday, April 26, 2024
HomeUncategorizedಕುಂದಾಪುರ: ಚಿನ್ನದ ಹೂಡಿಕೆಯಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ಮಹಿಳೆಗೆ ವಂಚನೆ !

ಕುಂದಾಪುರ: ಚಿನ್ನದ ಹೂಡಿಕೆಯಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ಮಹಿಳೆಗೆ ವಂಚನೆ !

spot_img
- Advertisement -
- Advertisement -

ಕುಂದಾಪುರದಲ್ಲಿ ಚಿನ್ನದ ಹೂಡಿಕೆಯಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ವಂಚಿಸಿರುವ ಘಟನೆ ನಡೆದಿದೆ . ಈ ಬಗ್ಗೆ ಕಂಪ್ಯೂರಿನ ನಗೀನಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ನಗೀನಾ ಅವರಿಗೆ ಫರಾಜ್ ಸಾಹೇಬ್ ಎಂಬಾತ ಕುಂದಾಪುರದ ಗೋಲ್ಡ್ ಜ್ಯೂವೆಲ್ಲರಿ ಅಂಗಡಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿರುವುದಾಗಿ ಪರಿಚಯಿಸಿಕೊಂಡು ಚಿನ್ನದ ಅಂಗಡಿಯಲ್ಲಿ ಹಣ ಮತ್ತು ಚಿನ್ನ ಹೂಡಿಕೆ ಮಾಡಿದರೆ ಲಾಭಾಂಶವನ್ನು ನೀಡುವುದಾಗಿ ನಂಬಿಸಿದ್ದಾನೆ.

ಇದನ್ನು ನಂಬಿದ ದೂರುದಾರರು 4,00,000 ರೂ . ನಗದು ಹಾಗೂ 488 ಗ್ರಾಂ ಚಿನ್ನ ಹೂಡಿಕೆ ಮಾಡಿದ್ದರು. ಆ ಬಳಿಕ ಆರೋಪಿತನು 400 ಗ್ರಾಂ ಚಿನ್ನವನ್ನು ವಾಪಾಸ್ಸು ನೀಡಿ ಉಳಿದ 4,00,000 ರೂ ಹಣವನ್ನು ಹಾಗೂ 88 ಗ್ರಾಂ ಚಿನ್ನವನ್ನು 2021 ರ ಫೆ .16 ರಂದು ನಿಡುವುದಾಗಿ ಎಗ್ರಿಮೆಂಟ್ ಮಾಡಿಕೊಂಡಿದ್ದ , ಆದರೆ ಆತ ಮೋಸ ಮಾಡಿದ್ದಾನೆ. ಅದನ್ನು ಹಿಂತಿರುಗಿಸಿ ನೀಡಲಿಲ್ಲ.

ಈ ಬಗ್ಗೆ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -
spot_img

Latest News

error: Content is protected !!