Saturday, April 20, 2024
Homeಅಪರಾಧಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಎಸಿಬಿ ಬಲೆಗೆ ಬಿದ್ದ ಪ್ರಕರಣ, ಮಂಗಳೂರು ನಿವಾಸದಲ್ಲಿ ಕೆಜಿಗಟ್ಟಲೆ ಚಿನ್ನ,...

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಎಸಿಬಿ ಬಲೆಗೆ ಬಿದ್ದ ಪ್ರಕರಣ, ಮಂಗಳೂರು ನಿವಾಸದಲ್ಲಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ,ಲಕ್ಷಾಂತರ ರೂಪಾಯಿ ಹಣ ಪತ್ತೆ.

spot_img
- Advertisement -
- Advertisement -

ಮಂಗಳೂರು : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೂವರು ಅಧಿಕಾರಿಗಳಾದ ಗುರುಪ್ರಸಾದ್ ,ನಯಿಮಾ ಸಯೀದ್, ಪ್ರಸಾದ್ ಸೇರಿ ವಾಣಿಜ್ಯ ಉದ್ದೇಶಕ್ಕೆ ಪರವಾನಿಗೆ ಕೊಡುವುದಕ್ಕಾಗಿ 2.5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಉಡುಪಿ ಎಸಿಬಿ ಅಧಿಕಾರಿಗಳು ನಗರಾಭಿವೃದ್ಧಿ ಕಛೇರಿ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಗುರುಪ್ರಸಾದ್ ಅವರ ಮಂಗಳೂರು ನಗರದ ಕೊಟ್ಟಾರದ ಸಾಗರ್ ಪೊರ್ಟ್ ರೋಡ್ ಬಳಿ ಇರುವ ನಿವಾಸದ ಮೇಲೆ ದಾಳಿ‌ ಮಾಡಲು ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಮಂಗಳೂರು ವಿಭಾಗದ ಎಸಿಬಿ ಅಧಿಕಾರಿಗಳ ತಂಡ ಗುರುವಾರ ಸಂಜೆ ದಾಳಿ ಮಾಡಿದ್ದರು ತಡರಾತ್ರಿ 12 ಗಂಟೆವರೆಗೂ ಮನೆಯನ್ನು ಮೂಲೆ ಮೂಲೆ ಪರಿಶೀಲನೆ ನಡೆಸಿದ್ದು ಈ ವೇಳೆ 3.50 ಲಕ್ಷ ರೂಪಾಯಿ ಹಣ , 1 ಕೆ.ಜಿ 200 ಗ್ರಾಂ ಚಿನ್ನ, 5 ಕೆ.ಜಿ.ಬೆಳ್ಳಿ, ಒಂದು ಕಾರು ಪತ್ತೆಯಾಗಿದೆ.

ಮಂಗಳೂರು ಎಸಿಬಿ ಎಸ್ಪಿ ಸಿ.ಎ.ಸೈಮನ್ ,ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ,ಹರಿಪ್ರಸಾದ್,ರಾಧಕೃಷ್ಣ.ಡಿ.ಎ,ರಾಧಕೃಷ್ಣ. ಕೆ,ವೈಶಾಲಿ ,ಆದರ್ಶ್ ‌ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!