Wednesday, June 3, 2026
Homeಕರಾವಳಿಉಡುಪಿಉಡುಪಿ: ನ್ಯಾಯಾಲಯದ ಸಿಬ್ಬಂದಿಗೆ ಮೊಬೈಲ್ ರೀಚಾರ್ಜ್ ಮಾಡುವುದಾಗಿ ವಂಚನೆ !

ಉಡುಪಿ: ನ್ಯಾಯಾಲಯದ ಸಿಬ್ಬಂದಿಗೆ ಮೊಬೈಲ್ ರೀಚಾರ್ಜ್ ಮಾಡುವುದಾಗಿ ವಂಚನೆ !

- Advertisement -
- Advertisement -

ಉಡುಪಿ: ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಲಯದ ದ್ವಿತೀಯ ದರ್ಜೆಯ ಸಹಾಯಕ ಅಂದಾನಯ್ಯ ಸ್ವಾಮಿ ಹಿರೇಮಠ ಅವರಿಗೆ ಕಸ್ಟಮರ್ ಕೇರ್ ಎಂದು ಕರೆ ಮಾಡಿ 43,399 ರೂ . ಕಳೆದುಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ .

ಅಂದಾನಯ್ಯ ಸ್ವಾಮಿ ಅವರು ಜ .7 ರಂದು ಅವರ ಮೊಬೈಲ್ ನಂಬರ್ ಗೆ ಪೇಟಿಎಮ್ ಮೂಲಕ ರೀಚಾರ್ಜ್ ಮಾಡಲು ಪ್ರಯತ್ನಿಸಿದ್ದರು. ಅದು ಫೇಲ್ ಆದ ಕಾರಣ ಗೂಗಲ್‌ನಲ್ಲಿ ಸರ್ಚ್ ಮಾಡಿ ಕಸ್ಟಮರ್ ಕೇರ್ ನಂಬರ್ ಪಡೆದು ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿಯ ಸೂಚನೆಯಂತೆ ಎನಿ ಡೆಸ್ಕ್ ಆ್ಯಪ್ ಡೌನ್ ಲೋಡ್ ಮಾಡಿ ತನ್ನ ಎ.ಟಿ.ಎಂ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ನೀಡಿದ್ದಾರೆ.

ಆದರೆ ಆ ಕೂಡಲೇ ಅವರ ಎರಡು ಎಸ್.ಬಿ.ಐ ಬ್ಯಾಂಕ್ ಖಾತೆಯಿಂದ ಒಟ್ಟು 43,399 ರೂ . ಹಣವನ್ನು ವರ್ಗಾವಣೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!