Friday, May 10, 2024
Homeಕರಾವಳಿಬೆಳ್ತಂಗಡಿ: ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಾಲ ಮರುಪಾವತಿ ಮಾಡದೆ ವಂಚನೆ..! ಸಾಲಗಾರನಿಗೆ ದಂಡ...

ಬೆಳ್ತಂಗಡಿ: ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಾಲ ಮರುಪಾವತಿ ಮಾಡದೆ ವಂಚನೆ..! ಸಾಲಗಾರನಿಗೆ ದಂಡ ವಿಧಿಸುವಂತೆ ನ್ಯಾಯಾಲಯದಿಂದ ಮಹತ್ವದ ತೀರ್ಪು…!

spot_img
- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಸಹಕಾರಿ ಸಂಘವೊಂದರಲ್ಲಿ ಸಾಲ ಪಡೆದುಕೊಂಡು ಮರುಪಾವತಿ ಮಾಡದೇ ಬಾಕಿ ಉಳಿಸಿ, ನಂತರ ನೀಡಿದ್ದ ಚೆಕ್ ಬೌನ್ಸ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಗಾರನಿಗೆ ನ್ಯಾಯಾಲಯವು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಬೆಳ್ತಂಗಡಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇಲ್ಲಿ ಸಾಲ ಪಡೆದು ಸಾಲ ಮರುಪಾವತಿ ನೀಡಿದ ಚೆಕ್ ಅಮಾನ್ಯಗೊಂಡ ಪ್ರಕರಣದಲ್ಲಿ ಆರೋಪಿ ಉಜಿರೆ ನಿವಾಸಿ ಅಶೋಕ್‌ ಉಪಾಧ್ಯಾಯರವರಿಗೆ ಶಿಕ್ಷೆ ವಿಧಿಸಿ ಬೆಳ್ತಂಗಡಿ ಮಾನ್ಯ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಬಿ.ಕೆ.ನಾಗೇಶ್ ಮೂರ್ತಿ ತೀರ್ಪು ನೀಡಿದ್ದಾರೆ.

ಆರೋಪಿ ಅಶೋಕ್‌ ಉಪಾಧ್ಯಾಯ ರೂ.10,00,720/- ನ್ನು ಪರಿಹಾರವಾಗಿ ಫಿರ್ಯಾದಿದಾರರಿಗೆ ನೀಡಬೇಕು. ತಪ್ಪಿದಲ್ಲಿ 1 ವರ್ಷ ಶಿಕ್ಷೆ ಅನುಭವಿಸುವಂತೆ ಮತ್ತು ರೂ.5000/- ವನ್ನು ದಂಡ ಪಾವತಿಸುವಂತೆ ಹಾಗು ತಪ್ಪಿದಲ್ಲಿ 2 ತಿಂಗಳು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಲಾಗಿದೆ. ಫಿರ್ಯಾದಿದಾರ ಸಂಘದ ಪರವಾಗಿ ನ್ಯಾಯವಾದಿಗಳಾದ ಮನೋಹರ ಕುಮಾರ್ ಇಳಂತಿಲ ಮತ್ತು ಸಂದೀಪ್.ಡಿ’ಸೋಜಾ ವಾದಿಸಿದ್ದಾರೆ.

- Advertisement -
spot_img

Latest News

error: Content is protected !!