- Advertisement -
- Advertisement -
ಸುಳ್ಯ: ಲೀಸಿಗೆ ಜಾಗವನ್ನು ಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ಸುಳ್ಯದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಅರಂಬೂರು ಕಲ್ಚರ್ಪೆ ನಿವಾಸಿ ಅನ್ವರ್ ಎಂಬಾತ ಬಂಧಿತ ವ್ಯಕ್ತಿ. ಸುಳ್ಯದಲ್ಲಿ750 ಎಕರೆ ಜಾಗವನ್ನು ಲೀಸಿಗೆ ನೀಡುವುದಾಗಿ ಹೇಳಿ 2010ನೇ ಇಸವಿಯಲ್ಲಿ 55 ಲಕ್ಷ ರೂಪಾಯಿಗಳನ್ನು ರಾಜೀವನ್, ಹಾಗೂ ಶ್ರೀಧರನ್ ಎಂಬವರಿಂದ ಪಡೆದು ನಂತರ ತಮ್ಮ ದೂರವಾಣಿ ಸಂಖ್ಯೆಯನ್ನು ಸ್ವಿಚ್ ಆಫ್ ಗೊಳಿಸಿ ತಲೆಮರೆಸಿಕೊಂಡಿದ್ದರು ಎಂದು ಕಾನತ್ತೂರಿನ ರಾಜೇಶನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಆದೂರು ಎಸ್‌ಐಟಿ ನಾರ್ ಕೋರ್ಟ್ ಪೊಲೀಸರು ಅನ್ವರ್ ಸುಳ್ಯದಲ್ಲಿರುವ ಮಾಹಿತಿ ಖಚಿತಪಡಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
- Advertisement -