Friday, April 26, 2024
Homeಕರಾವಳಿಉಡುಪಿಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ವಂ ಪೀಟರ್ ನೊರೊನ್ಹಾ ದೈವಾಧೀನ

ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ವಂ ಪೀಟರ್ ನೊರೊನ್ಹಾ ದೈವಾಧೀನ

spot_img
- Advertisement -
- Advertisement -

ಮಂಗಳೂರು: ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕರಾಗಿದ್ದು, ಹೋಮಿಯೊಪತಿ ಕಾಲೇಜು ಹಾಗೂ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಶ್ರಮಿಸಿದ ವಂ ಪೀಟರ್ ನೊರೊನ್ಹಾ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮಂಗಳೂರು ಬೊಂದೇಲಿನಲ್ಲಿ 31-01-1936 ರಂದು ಜನಿಸಿದ ಅವರು 1961 ರಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಗುರುವಾಗಿ ಅಭಿಶಿಕ್ತರಾಗಿ, ನಂತರ ಬಜಪೆ ಮತ್ತು ಬಿಜಯ್ ಇಗರ್ಜಿಗಳಲ್ಲಿ ಸಹಾಯಕ ಧರ್ಮಗುರುವಾಗಿ ಹಾಗೂ ಕಾಟಿಪಳ್ಳ, ಉಡುಪಿ, ಮೊಡಂಕಾಪು-ಬಂಟ್ವಾಳ ಮತ್ತು ಬೆಂದುರ್ ಇಗರ್ಜಿಗಳಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದರು. ಅವರು ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿದ್ದ 1978-1988 ಅವಧಿಯಲ್ಲಿ ಆಸ್ಪತ್ರೆಯ ಶತಮಾನೋತ್ಸವ (1980) ಆಚರಿಸಲಾಗಿತ್ತು.

ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆಯನ್ನು ಹಾಗೂ ಕರ್ನಾಟಕದ ಮೊದಲ ನರ್ಸಿಂಗ್ ಕಾಲೇಜನ್ನು ಸ್ಥಾಪಿಸಲು ಕ್ರಮ
ಕೈಗೊಂಡಿದ್ದರು. ಫಾದರ್ ಮುಲ್ಲರ್ ಹೋಮಿಯೊಪತಿ ಮೆಡಿಕಲ್ ಕಾಲೇಜು ಇಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ನಿವೃತ್ತಿಯ ನಂತರ ಅವರು ಜೆಪ್ಪುವಿನ ವಿಶ್ರಾಂತ ಧರ್ಮಗುರುಗಳ ನಿವಾಸದಲ್ಲಿ ವಾಸಿಸುತ್ತಿದ್ದರು.

ಅವರ ನಿಧನಕ್ಕೆ ಮಂಗಳೂರು ಬಿಷಪ್ ಅತಿ ವಂ. ಪೀಟರ್ ಪಾವ್ಲ್ ಸಲ್ಡಾನ್ಹಾ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತರು ಕಂಬನಿ ಮಿಡಿದಿದ್ದಾರೆ.

- Advertisement -
spot_img

Latest News

error: Content is protected !!