Tuesday, April 16, 2024
Homeಕರಾವಳಿಭಾರತದ ಕೊರೊನಾ ಸಂಕಷ್ಟಕ್ಕೆ ಸಹಾಯಹಸ್ತ ನೀಡಿದ ಬಹರೈನ್ ; 40 ಮೆಟ್ರಿಕ್‌ ಟನ್‌ ಆಕ್ಸಿಜನ್ ಪೂರೈಕೆ

ಭಾರತದ ಕೊರೊನಾ ಸಂಕಷ್ಟಕ್ಕೆ ಸಹಾಯಹಸ್ತ ನೀಡಿದ ಬಹರೈನ್ ; 40 ಮೆಟ್ರಿಕ್‌ ಟನ್‌ ಆಕ್ಸಿಜನ್ ಪೂರೈಕೆ

spot_img
- Advertisement -
- Advertisement -

ಮಂಗಳೂರು: ಭಾರತದ ಎದುರಿಸುತ್ತಿರುವ  ಕೊರೊನಾ ಸಂಕಷ್ಟಕ್ಕೆ ಇಡೀ ವಿಶ್ವವೇ ಮರುಗುತ್ತಿದೆ.   ಅನೇಕ ರಾಷ್ಟ್ರಗಳು ಭಾರತದ ನೆರವಿಗೆ ಮುಂದೆ ಬಂದಿದ್ದು, ಇದೀಗ ಬಹರೈನ್ ಕೂಡ ದೇಶಕ್ಕೆ ಆಕ್ಸಿಜನ್​ ಪೂರೈಕೆ ಮಾಡಿದೆ.

ಕೋವಿಡ್‌ ಸಂಕಷ್ಟ ಸಮಯದಲ್ಲಿ ಬಹರೈನ್​ ಸಹಾಯಹಸ್ತ ಚಾಚಿದ್ದು 40 ಮೆಟ್ರಿಕ್‌ ಟನ್‌ ಲಿಕ್ವಿಡ್‌ ಆಕ್ಸಿಜನ್‌ ನೆರವು ನೀಡಿದೆ. ಈ 40 ಟನ್‌ ಆಕ್ಸಿಜನ್‌ ಹೇರಿಕೊಂಡು ಭಾರತೀಯ ನೌಕಾಪಡೆಯ ಐಎನ್‌ಎಸ್‌ ತಲ್ವಾರ್‌ ನೌಕೆ ಬುಧವಾರ ಮಧ್ಯಾಹ್ನ ಮಂಗಳೂರು ಬಂದರು ತಲುಪಿದೆ.

20 ಟನ್‌ನ ಎರಡು ಪ್ರತ್ಯೇಕ ಕ್ರಯೋಜೆನಿಕ್‌ ಕಂಟೈನರ್‌ಗಳಲ್ಲಿ ತುಂಬಿರುವ ಆಕ್ಸಿಜನ್‌ನ್ನು ಸದ್ಯ ಇಳಿಸುವ ಕಾರ್ಯ ನಡೆಯುತ್ತಿದೆ. ಉಚಿತವಾಗಿ ಈ ಆಕ್ಸಿಜನ್‌ ನಿರ್ವಹಣೆ ಮಾಡುವಂತೆ ಕೇಂದ್ರ ಸರ್ಕಾರ ಎನ್‌ಎಂಪಿಟಿಗೆ ಸೂಚನೆ ನೀಡಿದೆ.

- Advertisement -
spot_img

Latest News

error: Content is protected !!