Saturday, May 18, 2024
Homeತಾಜಾ ಸುದ್ದಿಮೇಕೆ ಮರಿಗಾಗಿ ಜೀವವನ್ನೇ ಪಣಕ್ಕಿಟ್ಟ ಯುವಕ

ಮೇಕೆ ಮರಿಗಾಗಿ ಜೀವವನ್ನೇ ಪಣಕ್ಕಿಟ್ಟ ಯುವಕ

spot_img
- Advertisement -
- Advertisement -

ಎಲ್ಲೋ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡೋದಕ್ಕೆ ಕೆಲವರು ಎಂತೆಂಥದ್ದೋ ರಿಸ್ಕ್ ತೆಗೆದುಕೊಂಡ ವಿಡಿಯೋ ಫೋಟೋಗಳನ್ನು ನೀವೆಲ್ಲಾ ನೋಡಿರ್ತೀರಾ. ಅದೆಷ್ಟೋ ಇಂತಹ ಸನ್ನಿವೇಶಗಳಲ್ಲಿ ಕೆಲವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜೀವಗಳನ್ನು ರಕ್ಷಣೆ ಮಾಡಿದ್ದಾರೆ.ಆದರೆ ಇವತ್ತು ನಿಮ್ಗೆ ನಾವು ತೋರಿಸೋ ವಿಡಿಯೋ ನಿಜಕ್ಕೂ ನಿಮ್ಮನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ.

ಅಷ್ಟು ಆಗಿದ್ದು ಏನಪ್ಪಾ ಅಂದ್ರೆ, ಬಯಲಲ್ಲಿ ಅಡ್ಡಾಡುತ್ತಿದ್ದ ಮೇಕೆ ಮರಿಯೊಂದು ಅಡ್ಡಾಡುತ್ತಾ ಅಲ್ಲಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದೆ. ಇದನ್ನು ಅಲ್ಲೇ ಇದ್ದ ಯುವಕರು ಗಮನಿಸಿದ್ದಾರೆ. ಹೇಗಾದ್ರೂ ಮಾಡಿ ಇದನ್ನೇ ರಕ್ಷಣೆ ಮಾಡಲೇ ಮಾಡಬೇಕು ಎಂದು ನಿರ್ಧರಿಸಿದ ಆ ನಾಲ್ಕು ಯುವಕರು ಒಂದು ದೊಡ್ಡ ರಿಸ್ಕ್ ಗೆ ಕೈ ಹಾಕಿದ್ದಾರೆ.  ನಾಲ್ವರಲ್ಲಿ ಒಬ್ಬಾತನ್ನು ಉಲ್ಟಾ ಮಾಡಿ ಕೊಳವೆ ಬಾವಿಯೊಳಕ್ಕೆ ಇಳಿಸಿದ್ದಾರೆ. ಉಳಿದ ಮೂವರು ಆತನ ಕಾಲುಗಳಲ್ಲಿ ಹಿಡಿದುಕೊಂಡಿದ್ದಾರೆ. ಆತ ಒಳಗಿದ್ದ ಮೇಕೆ ಮರಿಯನ್ನು ಮೇಲಕ್ಕೆತ್ತಿದ್ದಾನೆ. ನಿಜಕ್ಕೂ ಈ ದೃಶ್ಯ ನೋಡಿದವರ ಮೈ ನಡುಗೋದು ಗ್ಯಾರಂಟಿ.

ಅಂದ್ಹಾಗೆ ಈ ವಿಡಿಯೋವನ್ನು ಅಸ್ಸಾಂನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹರ್ದಿ ಸಿಂಗ್ ತಮ್ಮ ಟ್ವಿಟರ್ ‌ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಎಲ್ಲಿ ಎಂದು ನಿಖರವಾಗಿ ಗೊತ್ತಿಲ್ಲ. ಆದರೆ ಅದರಲ್ಲಿ ಕನ್ನಡ ಮಾತನಾಡುವ ಶೈಲಿ ನೋಡಿದ್ರೆ ಇದು ಪಕ್ಕಾ ಕರ್ನಾಟಕದ ಯಾವುದೂ ಹಳ್ಳಿ ಅನ್ನೋದು ಪಕ್ಕಾ ಆಗುತ್ತೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

- Advertisement -
spot_img

Latest News

error: Content is protected !!