- Advertisement -
![]()
- Advertisement -
ಡಾಕಾ: ಬಾಂಗ್ಲಾದೇಶದ ರಾಜಧಾನಿ ಡಾಕಾ ಸಮೀಪ ಇಂದು ಬೆಳಗ್ಗೆ ದೋಣಿಯೊಂದು ಮುಳುಗಿ ಮೂವರು ಮಕ್ಕಳು ಸೇರಿದಂತೆ 30 ಮಂದಿ ನೀರು ಪಾಲಾಗಿದ್ದಾರೆ. ಈ ದುರ್ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಡಾಕಾದ ಶಾಂಬಜಾರ್ ಸಮೀಪ ಬೂರಿಗಂಗಾ ನದಿಯಲ್ಲಿ ಇಂದು ಬೆಳಗ್ಗೆ 9.30ರಲ್ಲಿ ಈ ಘಟನೆ ಸಂಭವಿಸಿದೆ. ಈವರೆಗೆ 18 ಪುರುಷರು, 7 ಮಹಿಳೆಯರು ಮತ್ತು ಮೂರು ಮಕ್ಕಳ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ನಾಪತ್ತೆಯಾದವರಿಗಾಗಿ ತೀವ್ರ ಶೋಧ ಮುಂದುವರೆದಿದೆ.
ಸುಮಾರು 100 ಜನರಿದ್ದ ದೋಣಿ ಮತ್ತೊಂದು ನೌಕೆಗೆ ಡಿಕ್ಕಿ ಹೊಡೆದು ಮಗುಚಿ ನೀರಿನಲ್ಲಿ ಮುಳುಗಿತು. ಈ ದುರ್ಘಟನೆಯಲ್ಲಿ ಈವರೆಗೆ 30 ಮಂದಿ ಜಲಸಮಾಧಿಯಾಗಿದ್ದಾರೆ. ಉಳಿದವರಿಗಾಗಿ ಶೋಧ ಮುಂದುವರೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಕಾರ್ಯಾಚರಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- Advertisement -


