Wednesday, May 15, 2024
Homeತಾಜಾ ಸುದ್ದಿಕಾಶ್ಮೀರ ಪ್ರತ್ಯೇಕತಾವಾದಿ ಹುರಿಯತ್​ ಕಾನ್ಫರೆನ್ಸ್​ಗೆ ರಾಜೀನಾಮೆ ಕೊಟ್ಟ ಗಿಲಾನಿ

ಕಾಶ್ಮೀರ ಪ್ರತ್ಯೇಕತಾವಾದಿ ಹುರಿಯತ್​ ಕಾನ್ಫರೆನ್ಸ್​ಗೆ ರಾಜೀನಾಮೆ ಕೊಟ್ಟ ಗಿಲಾನಿ

spot_img
- Advertisement -
- Advertisement -

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಹಿರಿಯ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಷಾ ಗಿಲಾನಿ ಹುರಿಯತ್ ಕಾನ್ಫರೆನ್ಸ್‍ನಿಂದ ಹೊರಬಂದಿದ್ದಾರೆ.

ಹುರಿಯತ್ ಕಾನ್ಫರೆನ್ಸ್ ವೇದಿಕೆಯಲ್ಲಿ ಇತ್ತೀಚೆಗೆ ಕಂಡುಬಂದಿರುವ ಬೆಳವಣಿಗೆ, ಭಿನ್ನಾಭಿಪ್ರಾಯಗಳು ಮತ್ತು ಕೆಲವು ಅಹಿತಕರ ಚಟುವಟಿಕೆಗಳಿಂದ ಬೇಸತ್ತು ತಾವು ಈ ಸಂಘಟನೆಯಿಂದ ಹೊರಬಂದಿರುವುದಾಗಿ ಪತ್ರ ಮತ್ತು ಆಡಿಯೋ ಮೂಲಕ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಆರ್ಟಿಕಲ್ 370 ಹಿಂಪಡೆದ ನಂತರ ಹುರಿಯತ್ ಕಾನ್ಫರೆನ್ಸ್​​ಗೆ ಕಟ್ಟು ನಿಟ್ಟಿನ ಕಡಿವಾಣವನ್ನು ಕೇಂದ್ರ ಸರ್ಕಾರ ಹಾಕಿದೆ. ಹೀಗಾಗಿ ಸಜವಾಗಿ ಅದು ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳಿಸುವಲ್ಲಿ ಆಗಿರಬಹುದು, ಕಲ್ಲು ತೂರಾಟ ನಡೆಸುವಲ್ಲಿ ಆಗಿರಬಹುದು ಅಥವಾ ಭಾರತದ ವಿರುದ್ಧ ಆಕ್ರೋಶ ಹುಟ್ಟು ಹಾಕುವಲ್ಲಿ ಇರಬಹುದು ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಹುರಿಯತ್​ನ ಅಧ್ಯಕ್ಷನಾಗಿದ್ದ ಗಿಲಾನಿ ವಿರುದ್ಧ ಪಾಕಿಸ್ತಾನ ಕೆಂಡ ಕಾರಿದ್ದರೆ, ಮತ್ತೊಂದೆಡೆ ಹುರಿಯತ್​ ಅಸ್ತಿತ್ವಕ್ಕೂ ಸಂಚಾರ ಬಂದೊದಗಿದೆ. ಹೀಗಾಗಿ ಇತ್ತೀಚೆಗೆ ಬಹಳ ಸೈಲೆಂಟ್ ಆಗಿದ್ದ ಗಿಲಾನಿ, ತಮ್ಮ ರಾಜಿನಾಮೆ ವಿವರಿಸಿ ಒಂದು ಆಡಿಯೋ ಮೆಸೆಜ್ ಕೂಡಾ ಮಾಡಿದ್ದಾರೆ.

90 ವರ್ಷದ ಗಿಲಾನಿ 2003ರಲ್ಲಿ ಹುರಿಯತ್ ಕಾನ್ಫರೆನ್ಸ್ ವೇದಿಕೆಯನ್ನು ಸ್ಥಾಪಿಸಿದ್ದರು. ಈ ಪ್ರತ್ಯೇಕವಾದಿ ಸಂಘಟನೆಯ ಸಂಸ್ಥಾಪಕರಾದ ಇವರು ಅಜೀವ ಅಧ್ಯಕ್ಷರಾಗಿ ಮುಂದುವರೆದಿದ್ದರು.

ಈಗ ಈ ಸಂಘಟನೆಯಿಂದ ಗಿಲಾನಿ ಹೊರಬಂದಿರುವುದು ಹುರಿಯತ ಕಾನ್ಫರೆನ್ಸ್‍ಗೆ ಭಾರೀ ಆಘಾತ ನೀಡಿದೆ. ಪ್ರತ್ಯೇಕತಾ ವಾದಿಗಳನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿರುವ ಸಂದರ್ಭದಲ್ಲೇ ಕಂಡುಬಂದಿರುವ ಈ ಬೆಳವಣಿಗೆ ಕಾಶ್ಮೀರದಲ್ಲಿ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿರುವವರಿಗೆ ಮತ್ತೊಂದು ಹೊಡೆತವಾಗಿದೆ.

- Advertisement -
spot_img

Latest News

error: Content is protected !!