Monday, June 8, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ನಾಲ್ವರು!

ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ನಾಲ್ವರು!

- Advertisement -
- Advertisement -

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊರವಲಯದ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ಅ. 14 ಸೋಮವಾರದಂದು ನಡೆದಿದೆ.

ಆತ್ಮಹತ್ಯೆಗೆ ಶರಣಾದವರು ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು ಎಂದು ತಿಳಿದು ಬಂದಿದೆ.

ಇನ್ನು ಈ ಘಟನೆಗೆ ಮುಖ್ಯ ಕಾರಣ ಕೌಟುಂಬಿಕ ಕಲಹ ಎಂದು ಶಂಕಿಸಲಾಗಿದೆ. ಕಲಬುರಗಿ ಮೂಲದ ದಂಪತಿ ಕಳೆದ ಕೆಲವು ವರ್ಷಗಳಿಂದ ಸಿಂಗನಾಯಕನಹಳ್ಳಿಯಲ್ಲಿ ವಾಸವಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಅವಿನಾಶ್ (33), ಮಮತಾ (30), ಅಧಿರಾ (05), ಅನಯಾ (03) ಮೃತ ದುರ್ದೈವಿಗಳು.

ಸ್ಥಳಕ್ಕೆ ರಾಜಾನುಗುಂಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್‌ ಅಧಿಕಾರಿ ಸಿಕೆ ಬಾಬಾ ತಿಳಿಸಿದ್ದಾರೆ.

- Advertisement -

Latest News

error: Content is protected !!