Monday, June 8, 2026
Homeತಾಜಾ ಸುದ್ದಿ'ಯುಐʼ ಸಿನಿಮಾ ಬಿಡುಗಡೆಯ ದಿನಾಂಕ ಘೋಷಿಸಿದ ರಿಯಲ್‌ ಸ್ಟಾರ್‌ ಉಪೇಂದ್ರ

‘ಯುಐʼ ಸಿನಿಮಾ ಬಿಡುಗಡೆಯ ದಿನಾಂಕ ಘೋಷಿಸಿದ ರಿಯಲ್‌ ಸ್ಟಾರ್‌ ಉಪೇಂದ್ರ

- Advertisement -
- Advertisement -

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅವರ ʼಯುಐʼ ಸಿನಿಮಾ ರಿಲೀಸ್‌ ದಿನಾಂಕದ ಬಗ್ಗೆ ಅಪ್ಡೇಟ್‌ ಇದೀಗ ಹೊರ ಬಿದ್ದಿದೆ.

ಉಪೇಂದ್ರ ಅವರ ‘UI’ ಸಿನಿಮಾ ಈಗಾಗಲೇ ಟೀಸರ್‌, ಹಾಡುಗಳ ಮೂಲಕ ಚಿತ್ರದ ತುಣುಕಿನೊಂದಿಗೆ ಜನರ ಎದುರು ಬಂದಿದ್ದು,ಇದೀಗ ಚಿತ್ರದ ಬಿಡುಗಡೆಯ ದಿನಾಂಕ ನಿಗದಿ ಮಾಡಿದ್ದಾರೆ. ಈ ಹಿಂದೆ ನವೆಂಬರ್‌ ನಲ್ಲಿ ಚಿತ್ರ ರಿಲೀಸ್‌ ಮಾಡುವ ಬಗ್ಗೆ ಉಪೇಂದ್ರ ಸುಳಿವು ನೀಡಿದ್ದರು. ಆದರೆ ಇಂದು ಅಧಿಕೃತವಾಗಿ ʼಯು-ಐʼ ಚಿತ್ರವು ಡಿಸೆಂಬರ್‌ 20ರಂದು ತೆರೆಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

https://x.com/nimmaupendra/status/

ಇನ್ನು ಉಪೇಂದ್ರ ಅವರು ʼಯು-ಐʼ ಚಿತ್ರ ರಿಲೀಸ್‌ ಪೋಸ್ಟರ್‌ ನಲ್ಲಿಯೂ ಟ್ವಿಸ್ಟ್‌ ನೀಡಿದ್ದಾರೆ. “ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್ / ಫ್ಲಾಪ್ ಅಂತ ಹೇಳ್ತಿದ್ರೀ, ಈ ಸಿನಿಮಾ ನಿಮ್ಮನ್ ನೋಡಿ…..” ಎಂದು ಎಕ್ಸ್ ನಲ್ಲಿ ಬರೆಯುವ ಮೂಲಕ ಮತ್ತಷ್ಟು ಸಿನಿಮಾ ಪ್ರಿಯರಲ್ಲಿ ಹುಳ ಬಿಡುವ ಕೆಲಸ ಮಾಡಿದ್ದಾರೆ ಉಪೇಂದ್ರ.

- Advertisement -

Latest News

error: Content is protected !!