Friday, June 5, 2026
Homeಕರಾವಳಿಬೆಳ್ತಂಗಡಿಯ ವಕೀಲರ ಸಂಘ(ರಿ)ದಿಂದ ಈದ್ ಮಿಲಾದ್ ಆಚರಣೆ

ಬೆಳ್ತಂಗಡಿಯ ವಕೀಲರ ಸಂಘ(ರಿ)ದಿಂದ ಈದ್ ಮಿಲಾದ್ ಆಚರಣೆ

- Advertisement -
- Advertisement -

ಬೆಳ್ತಂಗಡಿ: ವಕೀಲರ ಸಂಘ (ರಿ) ಬೆಳ್ತಂಗಡಿ ಇದರ ನೇತೃತ್ವದಲ್ಲಿ ಈದ್ ಮಿಲಾದ್ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂದೇಶ್ ಕೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀ ವಿಜಯೇಂದ್ರ ಟಿ ಹೆಚ್, ಹಿರಿಯ ಸಮಿತಿಯ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಎಸ್ ಲೋಬೋ, ಹಿರಿಯ ವಕೀಲರಾದ ಶ್ರೀ ಮಹಮ್ಮದ್ ಹನೀಫ್ ಹಾಗೂ ಶ್ರೀಮತಿ ಮುಮ್ತಾಜ್ ಬೇಗಂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಬಂಟ್ವಾಳದ ವಕೀಲರಾದ ಶ್ರೀ ಇಮ್ತಿಯಾಜ್ ಬಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ನವೀನ್ ಬಿ.ಕೆ ಬಂದಂತಹ ಎಲ್ಲರನ್ನು ಸ್ವಾಗತಿಸಿದರು. ನಿರೂಪಣೆ ಹಾಗೂ ಧನ್ಯವಾದವನ್ನು ವಕೀಲರಾದ ಶ್ರೀ ನವಾಜ್ ಶರೀಫ್ ನೆರವೇರಿಸಿದರು. ಕವಾಳಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಸಮಾರಂಭದಲ್ಲಿ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!