- Advertisement -
![]()
- Advertisement -
ಉಡುಪಿ: ಮದರಸಾದ ಹಾಸ್ಟೆಲ್ ನ ಬಾತ್ ರೂಂನಲ್ಲಿ ಬಾಲಕ ನೇಣಿಗೆ ಶರಣಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ರಂಗನಕೇರಿಯ ಮಾಲಿಕ್ ದಿನಾರ್ ಮದರಸದ ಹಾಸ್ಟೆಲ್ ನಲ್ಲಿ ನಡೆದಿದೆ.
ವಾರಂಬಳ್ಳಿ ನಿವಾಸಿ ಮೊಹಮ್ಮದ್ ತೌಸಿಫ್ ಮತ್ತು ರಿಹಾನ ಬೇಗಂ ಅವರ ಮಗ ಮೊಹಮ್ಮದ್ ಜಹೀದ್ (12) ಆತ್ಮಹತ್ಯೆಗೆ ಶರಣಾದ ಯುವಕ. ಜಹೀದ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡೆ ಹೇರಾಡಿಯ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ.
ರಜೆ ಹಿನ್ನೆಲೆ ಮನೆಗೆ ಬಂದಿದ್ದು, ಶುಕ್ರವಾರ ವಾಪಾಸು ಮದರಸಕ್ಕೆ ತೆರಳಿದ್ದ, ಶನಿವಾರ ರಾತ್ರಿ 9.00ಕ್ಕೆ ಊಟಕ್ಕೆ ಬಾರದೆ ಇರುವುದನ್ನು ಕಂಡು ಹುಡುಕಿದಾಗ ಬಾತ್‌ರೂಂನ ಸರಳಿಗೆ ಬೈರಸ್‌ನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ತಕ್ಷಣ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ ಅಲ್ಲಿ ಪರಿಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


