- Advertisement -
![]()
- Advertisement -
ಪುತ್ತೂರು: ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪುತ್ತೂರಿನ ಪರ್ಲಡ್ಕದಲ್ಲಿ ನಡೆದಿದೆ. ಅಣ್ಣು ನಾಯ್ಕ್, ಚಿದಾನಂದ್, ರಮೇಶ್ ನಾಯ್ಕ್ ಮೃತ ದುರ್ದೈವಿಗಳು.

ಗೋಂದೋಳು ಪೂಜೆಗೆ ಅಂತಾ ಪುಣಚಕ್ಕೆ ಸುಳ್ಯದ ಜಟ್ಟಿಪಳ್ಳ ನಿವಾಸಿಗಳು ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿದೆ. ನಿದ್ದೆ ಮಂಪರಿನಲ್ಲಿ ಕಂದಕಕ್ಕೆ ಕಾರು ಬಿದ್ದ ಪರಿಣಾಮ ಅಪಘಾತವಾಗಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳ್ಳಂ ಬೆಳಗ್ಗೆ 4:15 ಕ್ಕೆ ಕಾರು ಅಪಘಾತವಾಗಿದೆ.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಉದಯ ರವಿ ಹಾಗೂ ಎಫ್.ಎಸ್.ಐ. ಎಲ್ ತಂಡದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -


