Wednesday, April 16, 2025
Homeಕರಾವಳಿಮಹಿಳೆ ಕಿಡ್ನ್ಯಾಪ್ ಕೇಸ್; ಶಾಸಕ ಹೆಚ್.ಡಿ. ರೇವಣ್ಣ 4 ದಿನಗಳ ಕಾಲ ಎಸ್ ಐಟಿ ವಶಕ್ಕೆ

ಮಹಿಳೆ ಕಿಡ್ನ್ಯಾಪ್ ಕೇಸ್; ಶಾಸಕ ಹೆಚ್.ಡಿ. ರೇವಣ್ಣ 4 ದಿನಗಳ ಕಾಲ ಎಸ್ ಐಟಿ ವಶಕ್ಕೆ

spot_img
- Advertisement -
- Advertisement -

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ಅವರನ್ನು ಎಸ್ ಐಟಿ ಕಸ್ಟಡಿಗೆ ಒಪ್ಪಿಸಲಾಗಿದೆ.

ನಾಲ್ಕು ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ವಹಿಸಿ ನ್ಯಾಯಾಧೀಶ ರವೀಂದ್ರ ಕಟ್ಟೀಮನಿ ಆದೇಶ ನೀಡಿದ್ದಾರೆ.ಮೇ 8 ರವರೆಗೆ ಎಸ್ ಐಟಿ ಕಸ್ಟಡಿಗೆ ರೇವಣ್ಣ ಅವರನ್ನು ನೀಡಲಾಗಿದ್ದು, ನಾಲ್ಕು ದಿನಗಳ ಕಾಲ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ.

ನಿನ್ನೆ ಸಂಜೆ ಬಂಧಿಸಲ್ಪಟ್ಟಿದ್ದ ಅವರನ್ನು ಇಂದು ಸಂಜೆ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದ ಎಸ್ ಐಟಿ ಅಧಿಕಾರಿಗಳು ಬಳಿಕ ಬೆಂಗಳೂರಿನ ಕೋರಮಂಗಲದಲ್ಲಿರುವ ಜಡ್ಜ್ ನಿವಾಸಕ್ಕೆ ಹಾಜರುಪಡಿಸಿದ್ದರು.

ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಎದುರು ಎಸ್ ಐಟಿ ಅಧಿಕಾರಿಗಳು ಮನವಿ ಮಾಡಿದ್ದರೆ, ಕಸ್ಟಡಿಗೆ ನೀಡದಂತೆ ರೇವಣ್ಣ ಪರ ವಕೀಲರು ಮನವಿ ಮಾಡಿದ್ದರು.ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದ ವೇಳೆ ಹೆಚ್.ಡಿ. ರೇವಣ್ಣ ಕಣ್ಣೀರು ಹಾಕಿದ್ದರು ಎನ್ನಲಾಗಿದೆ.

- Advertisement -
spot_img

Latest News

error: Content is protected !!