Friday, June 5, 2026
Homeಕರಾವಳಿಪುತ್ತೂರಿನಲ್ಲಿ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣದ ಸೇಡು ತೀರಿಸಿಕೊಳ್ಳಲು ಪ್ಲಾನ್: ನಾಲ್ವರನ್ನು ಬಂಧಿಸಿ ಪ್ಲಾನ್ ವಿಫಲಗೊಳಿಸಿದ...

ಪುತ್ತೂರಿನಲ್ಲಿ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣದ ಸೇಡು ತೀರಿಸಿಕೊಳ್ಳಲು ಪ್ಲಾನ್: ನಾಲ್ವರನ್ನು ಬಂಧಿಸಿ ಪ್ಲಾನ್ ವಿಫಲಗೊಳಿಸಿದ ಪೊಲೀಸರು

- Advertisement -
- Advertisement -

ಪುತ್ತೂರು: ಸಂಭಾವ್ಯ ಕೊಲೆಯೊಂದನ್ನು ಪುತ್ತೂರು ನಗರ ಠಾಣೆ ಪೊಲೀಸರು ವಿಫಲಗೊಳಿಸಿದ್ದಾರೆ.

ಕಲ್ಲೇಗ ಟೈಗರ್ಸ್ ಹುಲಿ ವೇಷ ತಂಡದ ಮುಖ್ಯಸ್ಥನಾಗಿದ್ದ ಅಕ್ಷಯ್ ಕಲ್ಲೇಗ ಹತ್ಯೆಗೆ ಸೇಡು‌ ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳದ ಕಿಶೋರ್‌ ಕಲ್ಲಡ್ಕ (36), ಪುತ್ತೂರಿನ ಮನೋಜ್‌ (23), ಆಶಿಕ್‌ (28) ಮತ್ತು ಸನತ್‌ ಕುಮಾರ್‌ (24) ಪೊಲೀಸರ ಬಂಧನದಲ್ಲಿರುವ ಆರೋಪಿಗಳಾಗಿದ್ದಾರೆ.

ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿ ಮನೀಶ್ ಸಹೋದರ ಮನೋಜ್ ಗೆ ಆರೋಪಿಗಳು ಬೆದರಿಕೆ ಕರೆ ಮಾಡಿದ್ದು ಈ ಬಗ್ಗೆ ಮನೋಜ್
ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು‌.

ಮನೋಜ್ ಚಲನವಲನವನ್ನು ಗಮನಿಸುತ್ತಿದ್ದ ಆರೋಪಿಗಳು ಮುಕ್ರಂಪಾಡಿ ಬಳಿ ತಲವಾರು ಸಮೇತ ಕಾರಿನಲ್ಲಿ ಅವಿತಿದ್ದರು.

ಕಾರು ಮತ್ತು ತಲ್ವಾರ್ ಸಹಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ‌ ಪ್ರಕರಣ ದಾಖಲಾಗಿದೆ.

ಕಳೆದ ವರ್ಷದ ನವೆಂಬರ್ 6 ರಂದು ಪುತ್ತೂರಿನ ಕಲ್ಲೇಗದಲ್ಲಿ ನಡೆದಿದ್ದ ಅಕ್ಷಯ್ ಹತ್ಯೆ ನಡೆದಿತ್ತು.

- Advertisement -

Latest News

error: Content is protected !!