Monday, May 13, 2024
Homeಕರಾವಳಿವಿವೇಕ ಯೋಜನೆಯಡಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 35 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ

ವಿವೇಕ ಯೋಜನೆಯಡಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 35 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ

spot_img
- Advertisement -
- Advertisement -

ಮಂಗಳೂರು: ರಾಜ್ಯ ಸರ್ಕಾರದ ವಿವೇಕ ಯೋಜನೆಯಡಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 35 ತರಗತಿ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಿತು.

5 ಕೋಟಿ ರೂಪಾಯಿ ವೆಚ್ಚದಲ್ಲಿ 16 ಸರಕಾರಿ ಶಾಲೆಗಳಲ್ಲಿ 2022-23 ನೇ ಸಾಲಿನ ವಿವೇಕ ಯೋಜನೆಯಡಿ ತರಗತಿ ಕೊಠಡಿಗಳು ನಿರ್ಮಾಣವಾಗಲಿವೆ.

ಅತ್ತಾವರ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭೂಮಿ ಪೂಜೆ ನೆರವೇರಿಸಿದರು.

ಬಜಾಲ್ ಪಡ್ಪು ಶಾಲೆಯಲ್ಲಿ 2 ಕೊಠಡಿ, ಮಲ್ಲಿಕಟ್ಟೆ ಪ್ರೌಢ ಶಾಲೆಯಲ್ಲಿ 3 ಕೊಠಡಿ, ಅತ್ತಾವರದಲ್ಲಿ ಶಾಲೆಯಲ್ಲಿ 4 ಕೊಠಡಿ, ಸೂಟರ್ ಪೇಟೆ ಶಾಲೆಯಲ್ಲಿ 1 ಕೊಠಡಿ, ನಾಲ್ಯಪದವು ಪ್ರೌಢ ಶಾಲೆಯಲ್ಲಿ 2 ಕೊಠಡಿ, ಕದ್ರಿ ಶಾಲೆಯಲ್ಲಿ 1 ಕೊಠಡಿ, ಪದವು ಶಾಲೆಯಲ್ಲಿ 2 ಕೊಠಡಿ, ಜಪ್ಪಿನಮೊಗರು ಶಾಲೆಯಲ್ಲಿ 1 ಕೊಠಡಿ, ನಾಲ್ಯಪದವು ಶಾಲೆಯಲ್ಲಿ 2 ಕೊಠಡಿ, ಸ್ಯಾಂಡ್ ಪಿಟ್ ಬೆಂಗ್ರೆ ಶಾಲೆಯಲ್ಲಿ 2 ಕೊಠಡಿ, ಕಾಪಿಕಾಡು ಶಾಲೆಯಲ್ಲಿ 2 ಕೊಠಡಿ, ಬಲ್ಮಠ ಶಾಲೆಯಲ್ಲಿ 4 ಕೊಠಡಿ, ಮಣ್ಣಗುಡ್ಡೆ ಶಾಲೆಯಲ್ಲಿ 3 ಕೊಠಡಿ, ಗಾಂಧಿನಗರ ಶಾಲೆಯಲ್ಲಿ 3 ಕೊಠಡಿ, ಕಸಬಾ ಬೆಂಗ್ರೆ ಶಾಲೆಯಲ್ಲಿ 2 ಕೊಠಡಿಗಳು ನಿರ್ಮಾಣವಾಗಲಿವೆ.

- Advertisement -
spot_img

Latest News

error: Content is protected !!