Sunday, May 5, 2024
Homeತಾಜಾ ಸುದ್ದಿಸಾಫಲ್ಯ ಸೇವಾ ಸಂಘ, ಮುಂಬಯಿ - ಕ್ರೀಡಾ ಸ್ಪರ್ಧೆ 2022 ಕ್ಕೆ ಶ್ರೀನಿವಾಸ ಸಾಪಲ್ಯ ಚಾಲನೆ

ಸಾಫಲ್ಯ ಸೇವಾ ಸಂಘ, ಮುಂಬಯಿ – ಕ್ರೀಡಾ ಸ್ಪರ್ಧೆ 2022 ಕ್ಕೆ ಶ್ರೀನಿವಾಸ ಸಾಪಲ್ಯ ಚಾಲನೆ

spot_img
- Advertisement -
- Advertisement -

ಮುಂಬಯಿ: ಜೀವನದ ಪಥಸಂಚಲನದಲ್ಲಿ ಆಟೋಟ ಸ್ಪರ್ಧೆಯು ಜೀವನಕ್ಕೆ ಸ್ಫೂರ್ತಿದಾಯಕವಾಗಿದೆ. ಕೇವಲ ಸ್ಫೂರ್ತಿದಾಯಕ ಮಾತ್ರವಲ್ಲ ಅದು ಆ ವ್ಯಕ್ತಿಯನ್ನು ಉನ್ನತೋನ್ನತ ವ್ಯಕ್ತಿತ್ವಕ್ಕೆ ಕೊಂಡೊಯ್ಯಲು ಸಾಧ್ಯ. ಅದರಿಂದ ಗಳಿಸಿದ ಮಾನ್ಯತೆ, ಅದರಿಂದ ಪಡೆದ ಪುರಸ್ಕಾರ ಅದು ಜೀವನಪರ್ಯಂತ ನೆನಪಿಡಲು ಸಾಧ್ಯ ಎಂದು ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ತಿಳಿಸಿದ.

ನ.12 ರಂದು ಬೆಳಿಗ್ಗೆ ಕಾಂದಿವಿಲಿ ಪಶ್ಚಿಮದ ಪೊಯ್ಸರ್ ಜಿಮ್ಕಾನದಲ್ಲಿ ನಡೆದ ಸಾಫಲ್ಯ ಸೇವಾ ಸಂಘ, ಮುಂಬಯಿ – ಕ್ರೀಡಾ ಸ್ಪರ್ಧೆ – 2022 ಕ್ಕೆ ಚಾಲನೆ ನೀಡಿ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಒರ್ವ ವ್ಯಕ್ತಿ ಆಟೋಟ ಸ್ಪರ್ಧೆಯಲ್ಲಿ ಯಶಸ್ಸಿಯಾಗಬೇಕಾದರೆ ಅದರ ಹಿಂದೆ ಕಠಿಣ ಪರಿಶ್ರಮವಿದೆ. ಮಕ್ಕಳು ಕ್ರೀಡಾ ಸ್ಪರ್ಧೆ ಗಳಲ್ಲಿ ದಿನೇಶ್ ಪಾಪು ಗುಣ್ಕೂರು ತಂಡದ ಸಂಗೀತ ಕಲಾವಿದೆ ಸಂಗೀತ ಕಲಾವಿದ ದಿನೇಶ್ ಪಾಪು ಮಣ್ಕೂರು ಮುಂಡೆ ಕಾರ್ಯಕ್ರಮ ವಿಶೇಷ ಕಾರ್ಯಕ್ರಮ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಚಿನ್ನ ದ ಪದಕ ತಂದಲ್ಲಿ ಕೇವಲ ತಂದೆ, ತಾಯಂದಿರಿಗೆ ಮಾತ್ರವಲ್ಲ ಅದು ಅವರ ಜಾತೀಯ ಸಂಘಟನೆಗೂ ಸಂತೋಷವನ್ನುಂಟುಮಾಡುತ್ತದೆ. ಹಿರಿಯರ ಆಶೀರ್ವಾದವೂ ನಮಗಿರಲಿ. ಕ್ರೀಡಾ ಸ್ಪರ್ಧೆ ಯಲ್ಲಿ ಗೆಲುವು ಮುಖ್ಯವಲ್ಲ, ಬಾಗವಹಿಸುವುದು ಅತೀ ಮುಖ್ಯ. ನಮ್ಮ ಸಾಧಕರು ನಮ್ಮೊಂದಿಗೆ ಇದ್ದು ಪ್ರೋತ್ಸಾಹಿಸುದರಿಂದ ನಮಗೆ ಹೆಚ್ಚಿನ ಸ್ಪೂರ್ತಿ ದೊರಕುತ್ತದೆ. ಜನವರಿ ೨೨ ರಂದು ಬಂಟದ ಸಂಘದಲ್ಲಿ ನಡೆಯಲಿರುವ  ಸಾಫಲ್ಯ ಸೇವಾ ಸಂಘದ ಉತ್ಸವಕ್ಕೆ ಎಲ್ಲರೂ ಆಗಮಿಸಿ ಸಹಕರಿಸಬೇಕು ಎಂದರು. 

ಸಾಫಲ್ಯ ಸಮಾಜದ ಯುವಪ್ರತಿಭೆ ಅಂತಾರಾಷ್ಟ್ರೀಯ ಅಥ್ಲೆಟಿಕ್, ರಾಷ್ಟ್ರೀಯ ಜಂಪ್ ರೋಪ್ ಚಾಂಪಿಯನ್ ಮಾಸ್ಟರ್ ಇಶಾನ್ ಪುತ್ರನ್ ಇವರು ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ ತನ್ನ ಯಶಸ್ಸಿಗೆ ಆಶೀರ್ವದಿಸಿದ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಾ ಸದ್ಯದಲ್ಲೇ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲಿದ್ದು ನಿಮ್ಮೆಲ್ಲರ ಆಶೀರ್ವಾದ ನನಗಿರಲಿ ಎಂದರು.

ಗೌರವ ಅತಿಥಿಗಳಾಗಿ ರೇನ್ಬೋ ಬುಡೋಕನ್ ಕರಾಟೆ ಅಕಾಡೆಮಿಯ ಸ್ಥಾಪಕ ವಸಂತ್ ಶೆಟ್ಟಿ ಯವರು ಉಪಸ್ಥಿತರಿದ್ದು ಮಾತನಾಡುತ್ತಾ ತುಳು ಬಾಷೆ ಮಾತನಾಡಲು ನನಗೆ ತುಂಬಾ ಇಷ್ಟ. ತಂದೆ ತಾಯಂದಿರ ಮಾತೃ ಬಾಷೆಯನ್ನು ನಾವು ಮಾತನಾಡಲು ಕಲಿಯಬೇಕು. ಮಕ್ಕಳು ಉತ್ತಮರ ಸಹವಾಸವನ್ನು ಮಾಡುದರೊಂದಿಗೆ ಉತ್ತಮವಾದುದನ್ನು ಕಲಿಯಬೇಕು. ಕ್ರೀಡೆಯಲ್ಲಿ ಮೊದಲು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ರಾಷ್ಟ್ರದಲ್ಲಿ ಅನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾಗವಹಿಸಬಹುದು. ಪ್ರತಿಯೊಬ್ಬ ಕ್ರೀಡಾ ಪಟುವಿಗೆ ಗೆಲುವಿಗಿಂತ ಕ್ರೀಡೆಯಲ್ಲಿ ಬಾಗವಹಿಸುವುದು ಅತೀ ಮುಖ್ಯ. ಓದುವುದರೊಂದಿಗೆ ಕ್ರೀಡೆಯೂ ಅತೀ ಮುಖ್ಯ ಎಂದರು.

ಉದ್ಯಮಿ ಹಾಗೂ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ನಾಗೇಶ್ ಎನ್ ಸಪಲ್ಯ ಮಾತನಾಡುತ್ತಾ ನಮ್ಮ ಕುಂಟುಂಬದ ಕಾರ್ಯಕ್ರಮದಂತಿದ್ದು ಎಲ್ಲರನ್ನೂ ಇಲ್ಲಿ ಕಾಣಲು ಸಂತೋಷವಾಗುತ್ತಿದೆ. ಈ ಸಂಘಕ್ಕೆ ನನ್ನಿಂದಾಗುವ ಸಹಾಯವನ್ನು ನೀಡುವೆನು ಎಂದರು.

ವೇದಿಕೆಯಲ್ಲಿ ಅತಿಥಿ ಸಾಹಿಲ್ ಕುಮಾರ್ ಕಾರ್ಕಳ, ಉಪಾಧ್ಯಕ್ಷರಾದ ಕೃಷ್ಣಕುಮಾರ್ ಬಂಗೇರ, ಪ್ರಧಾನ ಕಾರ್ಯದರ್ಶಿ ಶೋಭಾ ಬಂಗೇರ, ಕೋಶಾಧಿಕಾರಿ ಹೇಮಂತ್ ಸಪಲಿಗ, ಕ್ರೀಡಾ ಸಮಿತಿಯ ಅಧ್ಯಕ್ಷ ಜೀವನ್ ಸಿರಿಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕಲಾ ಬಂಗೇರ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸಂದ್ಯಾ ಪುತ್ರನ್, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಜೀವನ್ ಶ್ರೀಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅವರೆಲ್ಲರ ಉಪಸ್ಥಿತಿಯಲ್ಲಿ ಬೆಲೂನ್ ಆರಿಸಿ ಕ್ರೀಡಾ ಚಾಲನೆ ನೀಡಲಾಯಿತು

 ಯುವ ವಿಭಾಗದ ಕಾರ್ಯಾದರ್ಶಿ ಶ್ವೇತಾ ಬಂಗೇರ ಮತ್ತು ಉಷ ಸಪಲಿಕ  ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಅತಿಥಿಗಳನ್ನು ಐಶ್ವರ್ಯ, ಸಂದ್ಯಾ ಪುತ್ರನ್, ದಿಶಾ ಬಂಗೇರ ಪರಿಚಯಿಸಿದರು. ಸ್ಪರ್ದೆಗೆ ತೀರ್ಪುಗಾರರಾಗಿ ಸೌರಬ್ ಕಟಾವತೆ, ಅನಿಕೇತ್ ದಲ್ವಿ, ರೋಹನ್ ಪದ್ವಾಲ್, ಅದಿತ್ಯ ಮತ್ತು ಮಹೇಶ್ ಸಹರಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡಾ ಸ್ಪರ್ದೆಗೆ ದಾನಿಗಳಾಗಿ ಸಹಕರಿಸಿದ ಎಲ್ಲರನ್ನೂ ಗೌರವಿಸಲಾಯಿತು.

ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿರುವ ಈ ಕ್ರೀಡೋತ್ಸವದಲ್ಲಿ ಮಹಿಳೆಯರಿಗೆ, ಪುರುಷರಿಗೆ ವಿಶೇಷವಾಗಿ ಮಕ್ಕಳಿಗೆ ಕ್ರಿಕೆಟ್ ಟೂರ್ನಮೆಂಟನ್ನು ನಡೆಯಿತು. 

ಕ್ರೀಡಾಕೂಟದಲ್ಲಿ ಹಿರಿ ಕಿರಿಯರು ಭಾಗವಹಿಸಿದ್ದು ಥ್ರೋಬಾಲ್, ಮಹಿಳೆಯರ ಹಾಗೂ ಪುರುಷರ ಕ್ರಿಕೆಟ್ ಪಂದ್ಯ ಈ ಕ್ರೀಡಾಕೂಟದ ವಿಶೇಷ ಆಕರ್ಷಣೆಯಾಗಿತ್ತು. ಲಕ್ಕಿಡಿಪ್ ಡ್ರಾ ಕೂಡ ನಡೆದಿದ್ದು ವಿಜೇತರಿಗೆ ಬಂಗಾರದ ನಾಣ್ಯಗಳನ್ನು ವಿತರಿಸಲಾಯಿತು. 

ಉಚಿತ ವೈದ್ಯಕೀಯ ಶಿಬಿರದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಚಿನ್ ಸಲ್ಯಾನ್ ಈ ಬಗ್ಗೆ ಮಾಹಿತಿಯಿತ್ತರು. ಕ್ರೀಡಾ ಸ್ಪರ್ಧೆ ಯ ಯಶಸ್ಸಿಗೆ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಎಲ್ಲಾ ಸದಸ್ಯರು ಸಹಕರಿಸಿದರು.

ಬಳಿಕ ವಿವಿಧ ರೀತಿಯ ಕ್ರೀಡಾಕೂಟಗಳು ನಡೆದವು

- Advertisement -
spot_img

Latest News

error: Content is protected !!