Monday, June 8, 2026
Homeಅಪರಾಧಪುತ್ತೂರು : ಅರಣ್ಯ ಸಿಬ್ಬಂದಿ ಮನೆಯಲ್ಲಿ 2.5 ಲಕ್ಷಕ್ಕೂ ಅಧಿಕ ಬೆಲೆಬಾಳುವ ಮರದ ದಿಮ್ಮಿಗಳ...

ಪುತ್ತೂರು : ಅರಣ್ಯ ಸಿಬ್ಬಂದಿ ಮನೆಯಲ್ಲಿ 2.5 ಲಕ್ಷಕ್ಕೂ ಅಧಿಕ ಬೆಲೆಬಾಳುವ ಮರದ ದಿಮ್ಮಿಗಳ ದಾಸ್ತಾನು; ಅರಣ್ಯ ಇಲಾಖೆಯಿಂದ ದಾಳಿ!

- Advertisement -
- Advertisement -

ಪುತ್ತೂರು: ಬೆಲೆಬಾಳುವ ಮರದ ದಿಮ್ಮಿಗಳನ್ನು ಕರ್ನಾಟಕ ಅರಣ್ಯ ರಬ್ಬರ್ ನಿಗಮದ ನೌಕರರೊಬ್ಬರ ಮನೆಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದು, ಪುತ್ತೂರು ಅರಣ್ಯ ಇಲಾಖೆ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.

ಪುತ್ತೂರು ಕೆಎಫ್‌ಡಿಸಿ ಇಲಾಖೆಯ ನೌಕರ, ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ಅರುಣ್ ಕುಮಾರ್ ಎಂಬವರ ಮನೆಯಲ್ಲಿ ಸುಮಾರು ರೂ. 2.5 ಲಕ್ಷಕ್ಕೂ ಅಧಿಕ ಬೆಲೆಯ ಬೀಟೆ, ಹಲಸು, ಸಾಗುವಾನಿ ಹಾಗೂ ಇತರೆ ಜಾತಿಯ ಮರದ ದಿಮ್ಮಿಗಳು ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ.

ಇನ್ನು ಮನೆಗೆ ದಾಳಿಯಾಗುತ್ತಿದ್ದಂತೆ ಅರುಣ್ ಕುಮಾರ್ ತಲೆಮರೆಸಿಕೊಂಡಿದ್ದಾರೆ.ಸದ್ಯ ಮನೆಗೆ ದಾಳಿ ನಡೆಸಿ ಮರದ ದಿಮ್ಮಿಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಅರುಣ್ ಅವರ ವಿರುದ್ಧ ಪ್ರಕರಣ ದಾಖಾಳ್ಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!