Thursday, June 27, 2024
Homeಕರಾವಳಿಉಡುಪಿಉಡುಪಿ: ಮರ ತೆರವಿಗೆ ಲಂಚ ಕೇಳಿದ ಅರಣ್ಯಾಧಿಕಾರಿ ಲೋಕಾಯುಕ್ತ ಬಲೆಗೆ

ಉಡುಪಿ: ಮರ ತೆರವಿಗೆ ಲಂಚ ಕೇಳಿದ ಅರಣ್ಯಾಧಿಕಾರಿ ಲೋಕಾಯುಕ್ತ ಬಲೆಗೆ

spot_img
- Advertisement -
- Advertisement -

ಉಡುಪಿ: ಮರ ತೆರವುಗೊಳಿಸಲು ಲಂಚ ಕೇಳಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬೈಂದೂರು ವಲಯದ ಉಪ‌ವಲಯ ಅರಣ್ಯ ಅಧಿಕಾರಿ ಬಂಗಾರಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಮತ್ತೋರ್ವ ಆರೋಪಿ ಅರಣ್ಯ ವೀಕ್ಷಕ ವಿನಾಯಕ ನಾಪತ್ತೆಯಾಗಿದ್ದಾನೆ.

ಹಲಸಿನ ಮರವನ್ನು ತೆರವುಗೊಳಿಸಲು ನಾಲ್ಕು ಸಾವಿರ ರೂಪಾಯಿ ಅನುಮತಿ ನೀಡಲು ಲಂಚ ಕೇಳಿದ ಆರೋಪ ವ್ಯಕ್ತವಾಗಿದ್ದು,
ಮರ ತೆರವು ಮಾಡಲು ಮಹಮ್ಮದ್ ಅನ್ವರ್ ಹಸನ್ ಅರ್ಜಿ ಸಲ್ಲಿಸಿದ್ದರು.ಆದರೆ ಅರಣ್ಯಾಧಿಕಾರಿಗಳು ಲಂಚ ಕೇಳಿದ ಹಿನ್ನಲೆಯಲ್ಲಿ ಹಸನ್ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಲೋಕಾಯುಕ್ತ ಎಸ್ಪಿ ಎಂ.ಎ. ನಟರಾಜ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಪ್ರಕಾಶ್ ಕೆ.ಸಿ. ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!