Sunday, June 7, 2026
Homeತಾಜಾ ಸುದ್ದಿಹಣಕ್ಕಾಗಿ ಮಗಳಿಗೆ ಮೂರನೇ ಮದುವೆ ಮಾಡಿಸಿದ ಪಾಪಿ ತಾಯಿ...

ಹಣಕ್ಕಾಗಿ ಮಗಳಿಗೆ ಮೂರನೇ ಮದುವೆ ಮಾಡಿಸಿದ ಪಾಪಿ ತಾಯಿ…

- Advertisement -
- Advertisement -

ಮಧ್ಯಪ್ರದೇಶ  ಹಣ ಮನುಷ್ಯನನ್ನು ಎಂತಹ ನೀಚ ಮಟ್ಟಕ್ಕೆ ಇಳಿಸುತ್ತೆ ಅನ್ನೋದಕ್ಕೆ ನೂರಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಆದರೆ ಹಣದಾಹಿ ಅಮ್ಮನೊಬ್ಬಳು ಸ್ವಂತ ಮಗಳಿಗೆ ದುಡ್ಡಿಗಾಗಿ ಅನ್ಯಾಯ ಮಾಡಿದ್ದಾಳೆ.

ಹೌದು..ಹಣಕ್ಕಾಗಿ ತಾಯಿಯೇ ತನ್ನ ಮಗಳಿಗೆ ಮೂರನೇ ಮದುವೆ ಮಾಡಿಸಿರುವ ಘಟನೆ ಮಧ್ಯಪ್ರದೇಶದ ಮಂಡಲಾ ಜಿಲ್ಲೆಯಲ್ಲಿ ನಡೆದಿದೆ.  ದೆಹಲಿಯಲ್ಲಿರುವ ಮೂರನೇ ಪತಿಯಿಂದ ಹಲ್ಲೆಗೊಳಗಾದ ಬಾಲಕಿ ಪೊಲೀಸ್ ಸಹಾಯವಾಣಿ 100ಕ್ಕೆ ಕಾಲ್ ಮಾಡಿ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಳು.

ಬಾಲಕಿಯನ್ನ ರಕ್ಷಿಸಿದ ಬಳಿಕ ಪೊಲೀಸರು ಆಕೆಯಿಂದ ಹೇಳಿಕೆಯನ್ನ ದಾಖಲಿಸಿಕೊಂಡಿದ್ದರು. ಮದುವೆ ಸೇರಿದಂತೆ ತಾಯಿ ಕುಟುಂಬವೂ ಮಂಡಲಾದಲ್ಲಿರುವದರಿಂದ ಪ್ರಕರಣವನ್ನ ವರ್ಗಾಯಿಸಲಾಗಿದೆ. ಈ ಹಿಂದೆಯೂ ತಾಯಿ ತನಗೆ ಎರಡು ಬಾರಿ ಮದುವೆ ಮಾಡಿಸಿದ್ದಳು. ಮೂರನೇ ಮದುವೆಗಾಗಿ ಯುವಕನಿಂದ 80 ಸಾವಿರ ರೂ. ಹಣವನ್ನ ವಧುದಕ್ಷಿಣೆ ರೂಪದಲ್ಲಿ ಪಡೆದುಕೊಂಡಿದ್ದಾಳೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.

ಮಂಡಲಾದಿಂದ ದೆಹಲಿಗೆ ಬಂದ ಬಾಲಕಿ ಮೇಲೆ ಮೂರನೇ ಪತಿ ಹಲ್ಲೆ ನಡೆಸುತ್ತಿದ್ದನು. ಇದರಿಂದ ನೊಂದ ಬಾಲಕಿ 100 ಸಂಖ್ಯೆಗೆ ಕರೆ ಮಾಡಿದ್ದಳು. ಈ ಮೊದಲು ಬಾಲಕಿಯನ್ನ ಮದುವೆಯಾಗಿದ್ದ ಇಬ್ಬರು, ತಾಯಿ ಮತ್ತು ಮೂರನೇ ಪತಿ ಸೇರಿದಂತೆ ಒಟ್ಟು ಐವರನ್ನ ಬಂಧಿಸಲಾಗಿದೆ. ಮದುವೆಗೆ ಸಹಾಯ ಮಾಡಿದ್ದ ಇನ್ನಿಬ್ಬರು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಂಡಲಾದಿಂದ ಕಾಲ್ಕಿತ್ತಿದ್ದಾರೆ.

- Advertisement -

Latest News

error: Content is protected !!