Wednesday, May 15, 2024
Homeತಾಜಾ ಸುದ್ದಿಒಂದು ಹೆಣ್ಣು ಮಗುವಿಗಾಗಿ ಆ ಮಹಾತಾಯಿ ಹೆತ್ತಿದ್ದು ಎಷ್ಟು ಮಕ್ಕಳನ್ನು ಗೊತ್ತಾ?

ಒಂದು ಹೆಣ್ಣು ಮಗುವಿಗಾಗಿ ಆ ಮಹಾತಾಯಿ ಹೆತ್ತಿದ್ದು ಎಷ್ಟು ಮಕ್ಕಳನ್ನು ಗೊತ್ತಾ?

spot_img
- Advertisement -
- Advertisement -

ಅಮೆರಿಕಾ: ಆ ದಂಪತಿಗೆ ಹೆಣ್ಣು ಮಗು ಅಂದ್ರೆ ಪಂಚಪ್ರಾಣ.. ತಮಗೆ ಒಂದು ಹೆಣ್ಣು ಮಗು ಹುಟ್ಟಬೇಕು.. ತಾವು ಹೆಣ್ಣು ಮಗುವಿನ ತಂದೆಯಾಯಿ ಆಗಬೇಕು ಅನ್ನೋದು ಹೆಬ್ಬಯಕೆ. ಅಷ್ಟಾದೂ ಯಾಕೋ ಅವರ ಆಸೆ ಫಲಿಸಿರಲಿಲ್ಲ.. ಅದು ಕೂಡ ಮದುವೆಯಾಗಿ 30 ವರ್ಷ ಕಾದರೂ ಹೆಣ್ಣು ಮಗುವಾಗಿರಲಿಲ್ಲ.. ಹೆಣ್ಣು ಮಗುವಿಗಾಗಿ ಹಂಬಲಿಸುತ್ತಿದ್ದ ಈ ದಂಪತಿಗೆ ಒಂದಲ್ಲ-ಎರಡಲ್ಲ-ಮೂರಲ್ಲ.. ಬರೋಬ್ಬರಿ 14 ಗಂಡು ಮಕ್ಕಳು ಜನಿಸಿದ್ದವು. ಅಷ್ಟಾದರೂ ಹೆಣ್ಣು ಮಗುವಾಗಿರಲಿಲ್ಲ.. ಹಾಗಂತ ಈ ದಂಪತಿ ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ.. ಹೆಣ್ಣು ಮಗುವಿನ ಆಸೆ ಬಿಟ್ಟಿರಲಿಲ್ಲ.. ಇವರ ನಿರಂತರ ಯತ್ನ ಕೊನೆಗೂ ಫಲಿಸಿದ್ದು 15 ನೇ ಮಗು ರೂಪದಲ್ಲಿ.. ಹೌದು ಇವರಿಗೆ ಹುಟ್ಟಿದ 15ನೇ ಮಗು ಹೆಣ್ಣು ಅನ್ನೋದು ವಿಶೇಷ..

ಅಷ್ಟಕ್ಕೂ ಇದು ನಡೆದಿದ್ದು ಅಮೆರಿಕಾದಲ್ಲಿ.. ಹೌದು.. ಅಮೆರಿಕದ ಮಿಚಿಗಾನ್ ನಿವಾಸಿ ಕಟೇರಿ ಶ್ವಾಂಡ್ಟ್ ಎನ್ನುವವರು ಗ್ರ್ಯಾಂಡ್ ರಾಪಿಡ್ಸ್ ನ ಮರ್ಸಿ ಹೆಲ್ತ್ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಸದ್ಯ ಮ್ಯಾಗಿ ಜಯ್ನೆ ಎಂದು ಕರೆಯಲಾಗುತ್ತಿದ್ದು, ಮ್ಯಾಗಿಯನ್ನು 14 ಸಹೋದರರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಮಗು ಜನಿಸುವಾಗ 3.4 ಕೆ.ಜಿ ತೂಕವಿದ್ದು, ಆರೋಗ್ಯವಾಗಿದೆ ಎನ್ನಲಾಗಿದೆ.

ಕಟೇರಿ ಶ್ವಾಂಡ್ಟ್ ಹಾಗೂ ಅವರ ಪತಿ ಜೇ 14 ಗಂಡು ಮಕ್ಕಳ ನಂತರ ಹೆಣ್ಣು ಮಗು ಜನಿಸಿದಕ್ಕೆ ತುಂಬಾ ಸಂತೋಷ ಪಟ್ಟಿದ್ದಾರೆ. ಈ ವರ್ಷ ನಮಗೆ ಹಲವು ಕಾರಣಗಳಿಂದ ಮೆಮೋರಿಯೇಬಲ್​. ಅದರಲ್ಲೂ ಮ್ಯಾಗಿ ಜನನ ನಮಗೆ ಬಹುದೊಡ್ಡ ಉಡುಗೊರೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!