Saturday, May 18, 2024
Homeತಾಜಾ ಸುದ್ದಿಈತನ ಕಹಾನಿ ಕೇಳಿದ್ರೆ ನಿಮಗೆ ತಲೆ ತಿರುಗೋದು ಗ್ಯಾರಂಟಿ: ಜೈಲಿನಲ್ಲಿ ಫ್ರೀ ಊಟ ಸಿಗುತ್ತೆ ಅಂತಾ...

ಈತನ ಕಹಾನಿ ಕೇಳಿದ್ರೆ ನಿಮಗೆ ತಲೆ ತಿರುಗೋದು ಗ್ಯಾರಂಟಿ: ಜೈಲಿನಲ್ಲಿ ಫ್ರೀ ಊಟ ಸಿಗುತ್ತೆ ಅಂತಾ ಈತ ಏನ್ ಮಾಡ್ತಿದ್ದ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು: ತಪ್ಪು ಮಾಡಿದ್ರೆ ನಾವು ಸಿಕ್ಕಿ ಹಾಕಿಕೊಳ್ಳಲ್ಲ ಅನ್ನೋ ನಂಬಿಕೆಯಿಂದಾನೋ, ಇಲ್ಲಾ ಗೊತ್ತಿಲ್ಲದೆನೋ ತಪ್ಪು ಮಾಡಿ ಜೈಲು ಸೇರೋ ಅದೆಷ್ಟೋ ಮಂದಿನಾ ನಾವು ನೋಡಿದ್ದೇವೆ. ಆದ್ರೆ ಸಿಕ್ಕಿ ಬೀಳ್ಬೇಕು ಅಂತಾನೇ ಮಹಾ ಅಪರಾದ ಮಾಡೋ ವ್ಯಕ್ತಿನಾ ನೀವೆಲ್ಲಾದ್ರೂ ನೋಡಿದ್ದೀರಾ…. ಇವತ್ತು ಅಂತ ಮಹಾನ್ ಕಿಲಾಡಿಯೊಬ್ಬನನ್ನು ನಾವು ನಿಮಗೆ ಪರಿಚಯಿಸ್ತೀವಿ.

ಅಂದ್ಹಾಗೆ ಆತನ ಹೆಸರು ಆರ್ಮುಗಂ. ಈ ಭೂಮಿಯಲ್ಲಿ ಅತಿ ಇಷ್ಟವಾಗುವ ಜಾಗ ಅಂದ್ರೆ ಆತನಿಗೆ ಜೈಲು. ಜೈಲಿನಿಂದ ಬಿಡುಗಡೆಯಾಗಿ ಬಂದ್ರೂ ಮೂರು ದಿನ ಇರಲ್ಲ. ಏನಾದರೂ ತರ್ಲೆ ಮಾಡಿ ಜೈಲು ಸೇರುತ್ತಾನೆ. ಇದೀಗ ಕೇವಲ 2500 ರೂಪಾಯಿ ಮಿಸ್ಸಿಂಗ್ ಆಗಿದೆ ಎಂದು ಭಾವಿಸಿ ಸೆಕ್ಯುರಿಟಿ ಗಾರ್ಡ್ ನ ತಲೆ ಮೇಲೆ ಹಾಲೋಬ್ರಿಕ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿ ಜೈಲು ಸೇರಿದ್ದಾನೆ. ಈತ ಜೈಲಿಗೆ ಹೋಗುತ್ತಿರುವುದು ಇದು ನಾಲ್ಕನೇ ಬಾರಿ. ಜೀವಾವಧಿ ಶಿಕ್ಷೆ ಅನುಭವಿಸಿ ಹೊರ ಬಂದರೂ ಆಸೆ ತೀರಲಿಲ್ಲ. ಮತ್ತೆ ಅಪರಾಧ ಮಾಡಿ ಜೈಲಿಗೆ ಹೋಗಿದ್ದಾನೆ.

ಕೂಲಿ ಮಾಡಿ ಕಷ್ಟ ಪಟ್ರೆ ಕಾಸು ಕೊಟ್ಟು ಊಟ ಮಾಡಬೇಕು. ಮನೆ ಬಾಡಿಗೆ ಕಟ್ಟಬೇಕು. ಎಲ್ಲದಕ್ಕೂ ಕಾಸು ಬೇಕು. ಆದ್ರೆ, ಅಪರಾಧ ಮಾಡಿ ಜೈಲಿಗೆ ಹೋದ್ರೆ, ಸರ್ಕಾರಿ ಊಟ, ಸರ್ಕಾರಿ ಮನೆ, ಸ್ವಲ್ಪ ಜ್ವರ ಬಂದ್ರೂ ಸರ್ಕಾರಿ ವಾಹನದಲ್ಲೇ ಆಸ್ಪತ್ರೆಗೆ ಹೋಗಿ ಫ್ರೀ ಚೆಕಪ್. ಕೋಟಿ ಖರ್ಚು ಆಗುತ್ತೆ ಅಂದ್ರೂ ಸರ್ಕಾರವೇ ವೆಚ್ಚ ಮಾಡುತ್ತದೆ. ಯಾವನಿಗೆ ಬೇಕು ಕೂಲಿ ಕೆಲಸ ಎಂಬುದೇ ಈ ಜೈಲು ಆರ್ಮುಂಗಂ ತತ್ವ. ಈಗಾಗಲೇ ಮೂರು ಕೊಲೆ ಕೇಸಲ್ಲಿ ಜೈಲಿಗೆ ಹೋಗಿದ್ದ ಈತ ಮತ್ತೆ ಕೊಲೆ ಮಾಡಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ವಾಪಸು ಹೋಗಿದ್ದಾನೆ.

ಜೈಲನ್ನೇ ಸ್ವಂತ ಮನೆ ಮಾಡಿಕೊಂಡಿರುವ ಆರ್ಮುಗಂ , ಮೂಲತಃ ತಮಿಳುನಾಡಿನ ಲಾಲನಪಾಡಿ ನಿವಾಸಿ. ಸದ್ಯಕ್ಕೆ ಬೆಂಗಳೂರಿನಲ್ಲಿ ಯಾವ ವಿಳಾಸವೂ ಇರಲಿಲ್ಲ. ಐದು ವರ್ಷಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಆರ್ಮುಗಂ ತಲಗಟ್ಟಪುರದ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಚ್ ಮ್ಯಾನ್ ಕೆಲಸ ಮಾಡುತ್ತಿದ್ದ. ಕಳೆದ ಜ. 27 ರಂದು ಕೆಲಸಕ್ಕೆಂದು ಮೆಹಬೂಬ್ ಸಾಬ್ ನನ್ನು ಕುರುಬರಹಳ್ಳಿಯಿಂದ ಕರಿಸಿದ್ದ. ಇಬ್ಬರೂ ಜತೆ ಗೂಡಿ ಪಾರ್ಟಿ ಮಾಡಿದ್ದರು. ಈ ವೇಳೆ ಆರ್ಮುಗಂಗೆ ಸೇರಿದ 2500 ರೂಪಾಯಿ ಹಣ ನಾಪತ್ತೆಯಾಗಿತ್ತು. ಈ ವಿಚಾರವಾಗಿ ಮೆಹಬೂಬ್ ಸಾಬ್ ಜತೆ ಜಗಳ ತೆಗೆದು ಹಾಲೋ ಬ್ರಿಕ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಮೆಹಬೂಬ್ ಸಾವನ್ನಪ್ಪಿದ್ದ, ಅರಿವಾದ ಕೂಡಲೇ ಅಲ್ಲಿಂದ ನಾಪತ್ತೆಯಾಗಿದ್ದ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ತಲಘಟ್ಟಪುರ ಠಾಣೆ ಪೊಲೀಸರು, ತಲೆ ಮರೆಸಿಕೊಂಡಿದ್ದ ಆರ್ಮುಗಂನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರ್ಮುಗಂ ವಿಚಾರಣೆ ವೇಳೆ ಆತನ ಕೊಲೆಯ ವೃತ್ತಾಂತ, ಜೈಲು ಶಿಕ್ಷೆಯ ತತ್ವ ಗೊತ್ತಾಗಿ ಪೊಲೀಸರೇ ಶಾಕ್ ಆಗಿದ್ದಾರೆ.

ಇನ್ನು ಮೈಸೂರಿನಲ್ಲಿ ಪತ್ನಿ ಜತೆ ವಾಸವಾಗಿದ್ದ ಆರ್ಮುಗಂ 1997 ರಲ್ಲಿ ಅಣ್ಣನ ಪತ್ನಿಯನ್ನು ಹತ್ಯೆ ಮಾಡಿ ಜೈಲಿಗೆ ಹೋಗಿದ್ದ. ದೇವರಾಜು ಅರಸು ನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ಅಣ್ಣನ ಹೆಂಡತಿಯನ್ನು ಕೊಲೆ ಮಾಡಿ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದ ಆರ್ಮುಂಗ ಕಣ್ಣು ಬಿದ್ದಿದ್ದು ಪತ್ನಿ ಮೇಲೆ. ಅರ್ಮುಗಂ ಜೈಲಿಗೆ ಹೋದ ಬಳಿಕ ಈತನ ಪತ್ನಿ ಬೇರೆಯವರ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ಗೊತ್ತಾಗಿ ಆರ್ಮುಗಂ 2004 ರಲ್ಲಿ ಪತ್ನಿಯನ್ನು ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಆರ್ಮುಗಂಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಜೈಲಿನಲಲ್ಲಿ ಇಪ್ಪತ್ತು ವರ್ಷ ಕಳೆದು ಬಂದಿದ್ದ ಆರ್ಮುಗಂ ಮತ್ತೆ ಬಿಡುಗಡೆಯಾಗಿದ್ದ. ಬಂದವನೇ ಊಟಕ್ಕಾಗಿ ವಾಚ್ ಮೆನ್ ಕೆಲಸಕ್ಕೆ ಸೇರಿದ್ದ. ಅಲ್ಲಿ ಇದೀಗ ಸ್ನೇಹಿತನಿಗೆ ಪಾರ್ಟಿ ಕೊಟ್ಟು ಬಿಡಿಗಾಸಿನ ವಿಚಾರವಾಗಿ ಹತ್ಯೆ ಮಾಡಿ ಜೈಲಿಗೆ ಸೇರಿದ್ದಾನೆ.

- Advertisement -
spot_img

Latest News

error: Content is protected !!