Wednesday, May 8, 2024
Homeತಾಜಾ ಸುದ್ದಿಮಂಗಳೂರು: ಭಾರೀ ಮಳೆಗೆ ಕಾಲ್ಸೇತುವೆ ನೀರುಪಾಲು: 60 ಕುಟುಂಬಗಳು ದ್ವೀಪದಲ್ಲಿ ಬಂಧಿ 

ಮಂಗಳೂರು: ಭಾರೀ ಮಳೆಗೆ ಕಾಲ್ಸೇತುವೆ ನೀರುಪಾಲು: 60 ಕುಟುಂಬಗಳು ದ್ವೀಪದಲ್ಲಿ ಬಂಧಿ 

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ಹೊರವಲಯದ ಪಾವೂರು ಉಳಿಯದಲ್ಲಿ ಕಾಲು ಸೇತುವೆ ನೀರುಪಾಲಾಗಿದೆ.

ಪಾವೂರು ಉಳಿಯ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸುಮಾರು 250 ಮೀಟರ್ ಉದ್ದದ ಕಾಲು ಸೇತುವೆ ಇದು‌. ಹೀಗಾಗಿ ಸುಮಾರು 60 ಕುಟುಂಬಗಳು ದ್ವೀಪದಲ್ಲಿ ಬಂಧಿಯಾಗಿದೆ‌. ಇಲ್ಲಿ ಸೇತುವೆ ನದಿ ಪಾಲಾದ ಹಿನ್ನೆಲೆಯಲ್ಲಿ ಅತ್ತ ಶಾಲೆಯೂ ಇಲ್ಲ, ಇತ್ತ ಆಹಾರವೂ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಿನನಿತ್ಯ ನೇತ್ರಾವತಿ ನದಿ ದಾಟಲು ಊರಿನ ಜನರು ತಮ್ಮ ಹಣದಿಂದಲೇ 250 ಮೀಟರ್ ಉದ್ದದ ಸೇತುವೆಯನ್ನು 18  ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದರು. ಈ‌ ಕುರಿತು ಶಾಶ್ವತ ಪರಿಹಾರಕ್ಕಾಗಿ ಕಳೆದ ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ.

- Advertisement -
spot_img

Latest News

error: Content is protected !!