Saturday, June 6, 2026
Homeತಾಜಾ ಸುದ್ದಿಭೀಕರ ಅಪಘಾತ,ಮದುವೆ ಸಂಭ್ರಮದಲ್ಲಿದ್ದ ಒಂದೇ ಕುಟುಂಬದ 7 ಮಂದಿ ಸಾವು

ಭೀಕರ ಅಪಘಾತ,ಮದುವೆ ಸಂಭ್ರಮದಲ್ಲಿದ್ದ ಒಂದೇ ಕುಟುಂಬದ 7 ಮಂದಿ ಸಾವು

- Advertisement -
- Advertisement -

ಧಾರವಾಡ: ಭೀಕರ ಅಪಘಾತ ಅಪಘಾತಕ್ಕೆ  ಏಳು ಜನ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ‌ ನಡೆದಿದೆ.  ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಏಳು ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಅನನ್ಯ (14), ಹರೀಶ (13), ಶಿಲ್ಪಾ (34), ನೀಲವ್ಚ (60), ಮಧುಶ್ರೀ (20) ಮಹೇಶ್ವರಯ್ಯ (11), ಶಂಭುಲಿಂಗಯ್ಯ (35), ಸಾವನ್ನಪ್ಪಿದ ದುರ್ದೈವಿಗಳು,

ಅಪಘಾತದಲ್ಲಿ ಆರು ಜನರಿಗೆ ಗಂಭೀರ ಗಾಯಗೊಂಡಿದ್ದು, ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿಕೊಂಡು ವಾಹನ ಬರುತ್ತಿತ್ತು ಎನ್ನಲಾಗಿದೆ.ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಮತ್ತು ಕಿಮ್ಸ್‌ಗೆ ದಾಖಲು ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!