Tuesday, May 14, 2024
Homeಚಿಕ್ಕಮಗಳೂರುಚಿಕ್ಕಮಗಳೂರು: ಸರ್ಕಾರದ ವಿರುದ್ಧ ಮಳೆ ಹಾನಿ ಸಂತ್ರಸ್ಥರ ಮೌನ ಪ್ರತಿಭಟನೆ

ಚಿಕ್ಕಮಗಳೂರು: ಸರ್ಕಾರದ ವಿರುದ್ಧ ಮಳೆ ಹಾನಿ ಸಂತ್ರಸ್ಥರ ಮೌನ ಪ್ರತಿಭಟನೆ

spot_img
- Advertisement -
- Advertisement -

ಚಿಕ್ಕಮಗಳೂರು: ಸಕಾಲಕ್ಕೆ ಸೂರು ಒದಗಿಸದ ಕಾರಣ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಧರಿಸಿಕೊಂಡು ಸಂತ್ರಸ್ತರ ಪ್ರತಿಭಟನೆ ನಡೆದಿದೆ‌‌. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ
ಮಲೆಮನೆ ಸಂತ್ರಸ್ತರಿಂದ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆದಿದೆ.

ಮೂಡಿಗೆರೆ ತಾಲೂಕಿನ ಜಾವಳಿ ನಾಡ ಕಚೇರಿಯಲ್ಲಿ ಕಪ್ಪು ಪಟ್ಟಿ ಧರಿಸಿ ಸಂತ್ರಸ್ತರಿಂದ ಧರಣಿ ನಡೆದಿದೆ. 2019ರ ಆಗಸ್ಟ್ 9ರಂದು ಮಳೆಗೆ ಮಲೆ ಮನೆ ಗ್ರಾಮದ ಮನೆಗಳು 5 ಮನೆಗಳು ಕೊಚ್ಚಿ ಹೋಗಿದ್ದವು. ಅಲ್ಲದೇ ತೋಟ ಗದ್ದೆಗಳು ಕೂಡಾ ಕೊಚ್ಚಿ ಹೋಗಿತ್ತು.

ಈವರೆಗೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸದ ಸರ್ಕಾರ ವಿರುದ್ಧ ಇಂದು ಪ್ರತಿಭಟನೆ ನಡೆಸಲಾಗಿದೆ. ಮಲೆಮನೆ ಗ್ರಾಮಕ್ಕೆ ಹಿಂದೆ ಭೇಟಿ ಸಿಎಂ ಆಗಿದ್ದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಭೇಟಿ ಕೊಟ್ಟಿದ್ದರು.

ಬರೀ ಮಾತಿನಲ್ಲೇ ಸಚಿವರು ಮತ್ತು ಅಧಿಕಾರಿಗಳು‌ ಸಮಾಧಾನ ಹೇಳಿದ್ದಾರೆಯೇ ಹೊರತು ಸೂರು ಕಲ್ಪಿಸಿಕೊಟ್ಟಿಲ್ಲ ಎಂಬುದು ಸಂತ್ರಸ್ಥರ ಅಳಲಾಗಿದೆ.

- Advertisement -
spot_img

Latest News

error: Content is protected !!