Thursday, May 2, 2024
Homeತಾಜಾ ಸುದ್ದಿಮಂಗಳೂರಿನಿಂದ ದಿಲ್ಲಿ, ಕೊಯಮತ್ತೂರು, ಬೆಳಗಾವಿಗೆ ವಿಮಾನ ಸೇವೆ, ಜುಲೈ 1 ರಿಂದ ಆರಂಭ

ಮಂಗಳೂರಿನಿಂದ ದಿಲ್ಲಿ, ಕೊಯಮತ್ತೂರು, ಬೆಳಗಾವಿಗೆ ವಿಮಾನ ಸೇವೆ, ಜುಲೈ 1 ರಿಂದ ಆರಂಭ

spot_img
- Advertisement -
- Advertisement -

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ಬೆಳಗಾವಿ ಹಾಗೂ ಕೊಯಮತ್ತೂರಿಗೆ ಮುಂದಿನ ತಿಂಗಳಿನಿಂದ ವಿಮಾನ ಸೇವೆ ಆರಂಭವಾಗಲಿದ್ದು, ಕರಾವಳಿಯ ಬಂದರು ನಗರಿಗೆ ಮತ್ತಷ್ಟು ನಗರಗಳು ಹತ್ತಿರವಾಗಲಿವೆ.

ಕಳೆದ ಎರಡು ವರ್ಷಗಳಿಂದ ಬೇಡಿಕೆಯಿದ್ದ ಮಂಗಳೂರಿನಿಂದ ಹೊಸದಿಲ್ಲಿಯನ್ನು ಸಂಪರ್ಕಿಸುವ ನೇರ ವಿಮಾನದ ಬೇಡಿಕೆ ಸಾಕಾರಗೊಂಡಿದ್ದು, ಜು. 1ರಿಂದ ಇಂಡಿಗೋ ಸಂಸ್ಥೆಯಿಂದ ತಡೆರಹಿತ ವಿಮಾನ ಸೇವೆ ಆರಂಭವಾಗಲಿದೆ. ದಿಲ್ಲಿಯಿಂದ ಬೆಳಗ್ಗೆ 7.40ಕ್ಕೆ ಟೇಕಾಫ್‌ ಆಗಲಿರುವ ವಿಮಾನ ಬೆಳಗ್ಗೆ 10.15ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್‌ ಆಗಲಿದೆ. ಬೆಳಗ್ಗೆ 10.45ಕ್ಕೆ ಮಂಗಳೂರಿನಿಂದ ನಿರ್ಗಮಿಸಲಿರುವ ವಿಮಾನ ಮಧ್ಯಾಹ್ನ 1.20ಕ್ಕೆ ದಿಲ್ಲಿಯಲ್ಲಿ ಇಳಿಯಲಿದೆ. ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಸೇರಿ ವಾರದಲ್ಲಿ ನಾಲ್ಕು ದಿನ ಈ ವಿಮಾನ ಕಾರ್ಯಾಚರಿಸಲಿದೆ.

ತಮಿಳುನಾಡಿನ ಕೊಯಮತ್ತೂರಿಗೆ ಮಂಗಳೂರಿನಿಂದ ವಿಮಾನ ಸೇವೆ ಬೇಕೆಂಬ ಬೇಡಿಕೆಯೂ ಈಡೇರಿದೆ. ಜು. 1ರಿಂದ ಅನ್ವಯವಾಗುವಂತೆ ಗೋ ಫಸ್ಟ್‌ ವಿಮಾನ ಸಂಸ್ಥೆ ಪ್ರತಿದಿನ ವಿಮಾನ ನಿರ್ವಹಣೆ ಮಾಡಲಿದೆ. ಮಧ್ಯಾಹ್ನ 1.30ಕ್ಕೆ ಮಂಗಳೂರಿನಿಂದ ಟೇಕಾಫ್‌ ಆಗುವ ವಿಮಾನ ಮಧ್ಯಾಹ್ನ 2.20ಕ್ಕೆ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಲಿದೆ. ಆದರೆ ಸದ್ಯ ಮುಂಬಯಿ-ಮಂಗಳೂರು ಗೋ ಫಸ್ಟ್‌ ವಿಮಾನ ಸೇವೆಯನ್ನೇ ಕೊಯಮತ್ತೂರಿಗೆ ವಿಸ್ತರಿಸಲಾಗಿದ್ದು, ಅಲ್ಲಿಂದ ಈ ವಿಮಾನ ಮತ್ತೆ ಮುಂಬಯಿಗೆ ತೆರಳಲಿದೆ. ಈ ಕಾರಣದಿಂದ ಮಂಗಳೂರು-ಕೊಯಮತ್ತೂರು ಏಕಮುಖ ಸಂಚಾರ ಮಾತ್ರ ಇರಲಿದ್ದು, ಕೊಯಮತ್ತೂರಿನಿಂದ ಮಂಗಳೂರಿಗೆ ಮರಳಿ ನೇರ ವಿಮಾನ ಸೇವೆ ಇರುವುದಿಲ್ಲ.

- Advertisement -
spot_img

Latest News

error: Content is protected !!