Friday, May 17, 2024
Homeತಾಜಾ ಸುದ್ದಿದಕ್ಷಿಣ ಕನ್ನಡ: ವಿದ್ಯಾರ್ಥಿಗಳ ಕೊರತೆ ಹಿನ್ನೆಲೆ: ಎರಡು ಪಿಯು ಕಾಲೇಜು ಬೇರೆ ಜಿಲ್ಲೆಗೆ ಸ್ಥಳಾಂತರ

ದಕ್ಷಿಣ ಕನ್ನಡ: ವಿದ್ಯಾರ್ಥಿಗಳ ಕೊರತೆ ಹಿನ್ನೆಲೆ: ಎರಡು ಪಿಯು ಕಾಲೇಜು ಬೇರೆ ಜಿಲ್ಲೆಗೆ ಸ್ಥಳಾಂತರ

spot_img
- Advertisement -
- Advertisement -

ದಕ್ಷಿಣ ಕನ್ನಡ: ಸತತವಾಗಿ ಶೂನ್ಯ ಮತ್ತು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳನ್ನು ಬೇಡಿಕೆ ಇರುವ ಸರಕಾರಿ ಪ್ರೌಢ ಶಾಲೆಗಳಿಗೆ ಹುದ್ದೆ ಸಮೇತ ಸ್ಥಳಾಂತರಿಸಿ ಸರಕಾರಿ ಪ.ಪೂ. ಕಾಲೇಜುಗಳಾಗಿ ಮೇಲ್ದರ್ಜೇಗೇರಿಸಿ ಸರಕಾರ ಆದೇಶ ಮಾಡಿದೆ. ಅದರಂತೆ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಪದವಿ ಪೂರ್ವ ಕಾಲೇಜು ಸಹಿತ ಜಿಲ್ಲೆಯ ಎರಡು ಸೇರಿದಂತೆ ರಾಜ್ಯದಲ್ಲಿ ಒಟ್ಟು ಏಳು ಸರಕಾರಿ ಪಿಯು ಕಾಲೇಜುಗಳು ಸ್ಥಳಾಂತರಗೊಳ್ಳಲಿವೆ.

ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಸ.ಪ.ಪೂ. ಕಾಲೇಜು ಕೋಲಾರ ಜಿಲ್ಲೆಯ ಬಂಗಾರು ತಿರುಪತಿಗೆ, ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಸ.ಪ.ಪೂ. ಕಾಲೇಜು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ಪಡಕೆರೆಗೆ ಸ್ಥಳಾಂತರಗೊಳ್ಳಲಿವೆ.

- Advertisement -
spot_img

Latest News

error: Content is protected !!