Tuesday, April 23, 2024
HomeUncategorizedಕುರು ಕುರೇ ಪ್ಯಾಕೆಟ್ ನಲ್ಲಿ ಸಿಕ್ತು ಗರಿ ಗರಿ 500 ರೂಪಾಯಿ ನೋಟುಗಳು; ದುಡ್ಡಿನ ಆಸೆಯಿಂದ...

ಕುರು ಕುರೇ ಪ್ಯಾಕೆಟ್ ನಲ್ಲಿ ಸಿಕ್ತು ಗರಿ ಗರಿ 500 ರೂಪಾಯಿ ನೋಟುಗಳು; ದುಡ್ಡಿನ ಆಸೆಯಿಂದ ಕುರು ಕುರೇ ಖರೀದಿಗೆ ಮುಗಿ ಬಿದ್ದ ಜನ

spot_img
- Advertisement -
- Advertisement -

ರಾಯಚೂರು: ಕುರ್​ ಕುರೇ ತಿನಿಸಿನ ಪ್ಯಾಕೆಟ್ ನಲ್ಲಿ 500 ರೂಪಾಯಿಯ ನೋಟುಗಳು ಸಿಕ್ಕಿದೆ ಎಂದು ಮಕ್ಕಳ ಜೊತೆಗೆ ಪೋಷಕರು ಕೂಡ ಕುರು ಕುರೇ ಖರೀದಿಗೆ ಮುಗಿಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹುನೂರು ಗ್ರಾಮದಲ್ಲಿ ಮಕ್ಕಳ ಕುರ್ ಕುರೆ ಪ್ಯಾಕೆಟ್​ನಲ್ಲಿ 500 ರೂಪಾಯಿ ನೋಟ್​ಗಳು ಪತ್ತೆಯಾಗಿವೆ. ವಿವಿಧ ಕಂಪನಿಗಳ 5 ರೂ. 2ರೂ‌.ನ ಕುರ್ ಕುರೆ ಪ್ಯಾಕೆಟ್​ನಲ್ಲಿ 500 ಮುಖಬೆಲೆಯ ನೋಟ್​ಗಳು ಪತ್ತೆಯಾಗುತ್ತಿದ್ದು ಜನ ಕುರ್ ಕುರೆ ಖರೀದಿಗೆ ಮುಗಿಬಿದ್ದಿದ್ದಾರೆ ಎನ್ನಲಾಗಿದೆ.

ಒಂದೊಂದು ಪ್ಯಾಕೆಟ್​ನಲ್ಲಿ 5-6 ನೋಟ್​ಗಳು ಕೂಡ ಪತ್ತೆಯಾಗಿವೆ. ಕೆಲವೊಂದರಲ್ಲಿ ಎರಡು ಮೂರು ನೋಟುಗಳು ಸಿಕ್ಕಿವೆ. ಹೀಗೆ ವಿವಿಧ ಪ್ಯಾಕೆಟ್​ಗಳಲ್ಲಿ ಸುಮಾರು 20 ಸಾವಿರದಷ್ಟು ಹಣ ಪತ್ತೆಯಾಗಿದೆ ಎನ್ನಲಾಗಿದ್ದು, ಇದು ಎಷ್ಟು ನಿಜ ಅನ್ನೋದು ತನಿಖೆಯಿಂದ ಗೊತ್ತಾಗ್ಬೇಕಿದೆ.

- Advertisement -
spot_img

Latest News

error: Content is protected !!