Saturday, May 4, 2024
Homeಕರಾವಳಿಬೆಳ್ತಂಗಡಿ: ಉತ್ತರ ಕರ್ನಾಟಕಕ್ಕೆ ರಾಜಧಾನಿ ವಿಜಯನಗರ ಆಗುತ್ತೆ ಎಂದು ಪ್ರಸ್ತಾಪ:ಧರ್ಮಸ್ಥಳದಲ್ಲಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದ...

ಬೆಳ್ತಂಗಡಿ: ಉತ್ತರ ಕರ್ನಾಟಕಕ್ಕೆ ರಾಜಧಾನಿ ವಿಜಯನಗರ ಆಗುತ್ತೆ ಎಂದು ಪ್ರಸ್ತಾಪ:ಧರ್ಮಸ್ಥಳದಲ್ಲಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದ ಸಚಿನ ಆನಂದ್ ಸಿಂಗ್

spot_img
- Advertisement -
- Advertisement -

ಬೆಳ್ತಂಗಡಿ : ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ರಾಜ್ಯಕ್ಕೆ ರಾಜಧಾನಿ ವಿಜಯ ನಗರ ನಮ್ಮ ಪಕ್ಷಕ್ಕೆ ಆಗುತ್ತೆ ಎಂದು ಬಿಜೆಪಿ ಕಚೇರಿಯ ಶಂಕು ಸ್ಥಾಪನೆಯ ಕಾರ್ಯಕ್ರಮದಲ್ಲಿ ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದು ಇದರಿಂದ ಕನ್ನಡ ಪರ ಸಂಘಟನೆ ಹಾಗೂ ರಾಜ್ಯದ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲೆ ಸಂಜೆ ವೇಳೆಗೆ ಉಲ್ಟಾ ಹೇಳಿಕೆ ನೀಡಿದ್ದಾರೆ‌.

ಈ ಹಿಂದೆ ಉಮೇಶ್ ಕತ್ತಿ ಕೂಡ ಪ್ರತ್ಯೇಕ ಮಾಡಬೇಕೆಂದು ಕೂಗು ಕೇಳಿಬಂದ ಬಳಿಕ ಬಿಜೆಪಿ ಸಚಿವ ಆನಂದ್ ಸಿಂಗ್ ಕೂಡ ಬಿಜೆಪಿ ಕಚೇರಿಯ ಶಂಕು ಸ್ಥಾಪನೆಯ ಕಾರ್ಯಕ್ರಮದಲ್ಲಿ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ರಾಜ್ಯಕ್ಕೆ ರಾಜಧಾನಿ ವಿಜಯನಗರ ಅಗುತ್ತೆ ಇದು ಕಲ್ಪನೆ ಮತ್ತು ವಿಚಾರ ಎಂದು ಹೇಳಿಕೆ ನೀಡಿದ್ದರು . ಇದು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಅದಲ್ಲದೆ ಕನ್ನಡ ಪರ ಸಂಘಟನೆ ಹಾಗೂ ರಾಜ್ಯದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದರು . ಇದರ ಬೆನ್ನಲ್ಲೇ ಡಿ.16 ರಂದು ಸಂಜೆ ಧರ್ಮಸ್ಥಳದ ಸಿ.ಎ.ಬ್ಯಾಂಕ್ ನ ಅಟಲ್ ಜೀ ಸಭಾಂಗಣದಲ್ಲಿ ನಡೆದ ಬಿಜೆಪಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡುವಾಗ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದಾಗ ಮಾಧ್ಯಮದ ಸ್ನೇಹಿತರು ಸರಿಪಡಿಸಿಕೊಳ್ಳ್ಬೇಕಾಗುತ್ತೆ.  ನಾನು ಹೇಳಿರುವುದು ಉತ್ತರ ಕರ್ನಾಟಕ ಹೊಸ ರಾಜ್ಯ ಅಗುತ್ತೆ ಅದಕ್ಕೆ ನಮ್ಮ ವಿಜಯ ನಗರ ರಾಜಧಾನಿ ಆಗುತ್ತೆ ಅಂತ ಹೇಳಿರುವುದು. ಅದರಲ್ಲಿ ಆ ತರ ಹೇಳಿಲ್ಲ ನಾನು ಚೆಕ್ ಮಾಡಿದೆ. ನಾನು ಏನೂ ಹೇಳಿದೆ ಈ ಭಾಗದ ಉತ್ತರ ಕರ್ನಾಟಕದಲ್ಲಿರುವ ಬಿಜೆಪಿ ಯಾವ್ಯಾವ ಜಿಲ್ಲೆಗಳಲ್ಲಿರುತ್ತೆ. ಆ ನಮ್ಮ ಪಕ್ಷಕ್ಕೆ ರಾಜಧಾನಿ ಅಗುತ್ತೆ. ಯಾಕಾಂದ್ರೆ ಜಿಲ್ಲಾ ಕೇಂದ್ರ ಯಾವುದು ಅಗಬೇಕಾಂದ್ರೆ ರಾಯಚೂರು , ಗುಲ್ಬರ್ಗ ,ಬೀದರ್ ನಮ್ಮ ಬಳ್ಳಾರಿ ,ಹೊಸಪೇಟೆ ಇದು ಉತ್ತರ ಕರ್ನಾಟಕ ಅಂದ್ರೆ ಕಲ್ಯಾಣ ಕರ್ನಾಟಕ. ಕಲ್ಯಾಣ ಕರ್ನಾಟಕಕ್ಕೆ ನಮ್ಮ ವಿಜಯ ನಗರ ಕ್ಷೇತ್ರ ಬಂದು ರಾಜಧಾನಿ ಅಗುತ್ತೆ ಅಂತ ಆ ಒಂದು ಇದರಲ್ಲಿ ಹೇಳಿರುವುದು. ಪ್ರತ್ಯೇಕ ರಾಜ್ಯ ಆಗುತ್ತೆ ಅನ್ನುವುದನ್ನು ದಯವಿಟ್ಟು ಮಾಧ್ಯಮದ ಮಿತ್ರರು ಸರಿಪಡಿಸಿಕೊಳ್ಳಬೇಕೆಂದು ಹೇಳಿಕೆ ನೀಡಿದ್ದಾರೆ‌.

- Advertisement -
spot_img

Latest News

error: Content is protected !!