Friday, May 3, 2024
Homeಕರಾವಳಿಪುತ್ತೂರು: ಪೊಲೀಸ್ ಆಗಬೇಕು ಎಂಬ ಕನಸು ಹೊತ್ತಿದ್ದ ವಿದ್ಯಾರ್ಥಿನಿ ಜ್ವರಕ್ಕೆ ಬಲಿ; ಬಾಲಕಿಗೆ ಅಂತಿಮ ನಮನ ಸಲ್ಲಿಸಿದ...

ಪುತ್ತೂರು: ಪೊಲೀಸ್ ಆಗಬೇಕು ಎಂಬ ಕನಸು ಹೊತ್ತಿದ್ದ ವಿದ್ಯಾರ್ಥಿನಿ ಜ್ವರಕ್ಕೆ ಬಲಿ; ಬಾಲಕಿಗೆ ಅಂತಿಮ ನಮನ ಸಲ್ಲಿಸಿದ ಡಿವೈಎಸ್ಪಿ

spot_img
- Advertisement -
- Advertisement -

ಪುತ್ತೂರು: ಪೊಲೀಸ್ ಆಗಬೇಕು ಎಂಬ ಕನಸು ಹೊತ್ತಿದ್ದ ವಿದ್ಯಾರ್ಥಿನಿ ಜ್ವರಕ್ಕೆ ಬಲಿಯಾದ ಘಟನೆ ಕಾವು ಎಂಬಲ್ಲಿ ನಡೆದಿದೆ. ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಅನುಶ್ರೀ (14) ಮೃತ ವಿದ್ಯಾರ್ಥಿನಿ.

ಕಾವು ನಿವಾಸಿ ಧರ್ಮಲಿಂಗಮ್‌ ಅವರ ಪುತ್ರಿ. ಮೂರು ದಿನಗಳ ಹಿಂದೆ ಜ್ವರ ಕಾಣಿಸಿದ್ದು, ಪುತ್ತೂರು ಆಸ್ಪತ್ರೆಯಿಂದ ಔಷಧ ಪಡೆದಿದ್ದರು.ಡಿ.15 ರಂದು ರಾತ್ರಿ ಆಕೆಯ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ಕರೆ ತಂದಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಅನುಶ್ರೀ ಅವರು ಭವಿಷ್ಯದಲ್ಲಿ ಪೊಲೀಸ್‌ ಅಧಿಕಾರಿ ಆಗಬೇಕು ಎನ್ನುವ ಕಾರಣಕ್ಕೆ ಕೊಂಬೆಟ್ಟಿಗೆ ಸೇರಿದ್ದಳು. ಇಲ್ಲಿ ಪೊಲೀಸ್‌ ಕೆಡೆಟ್‌ ತರಬೇತಿ ಪಡೆಯುತ್ತಿದ್ದು, ತಾನು ಪೊಲೀಸ್‌ ಆಗುವ ಕನಸು ಹೊತ್ತಿದ್ದಳು. ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆಕೆಯ ಪೊಲೀಸ್‌ ಆಗುವ ಕನಸು ಕನಸಾಗಿಯೇ ಉಳಿಯಿತು. ಈ ಕುರಿತು ಮಾಹಿತಿ ಪಡೆದ ಪುತ್ತೂರು ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಅವರು ಅನುಶ್ರೀ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್‌ ಉಪಸ್ಥಿತರಿದ್ದರು. ಅನುಶ್ರೀ ನಿಧನದ ಹಿನ್ನಲೆಯಲ್ಲಿ ಡಿ.16 ರಂದು ಶಾಲೆಗೆ ರಜೆ ನೀಡಲಾಗಿತ್ತು.

- Advertisement -
spot_img

Latest News

error: Content is protected !!