Wednesday, June 24, 2026
Homeತಾಜಾ ಸುದ್ದಿಬಿಜೆಪಿ ಪಕ್ಷದಿಂದ ಕುಮಾರ್ ಬಂಗಾರಪ್ಪರ ಐವರು ಆಪ್ತರ ಉಚ್ಛಾಟನೆ

ಬಿಜೆಪಿ ಪಕ್ಷದಿಂದ ಕುಮಾರ್ ಬಂಗಾರಪ್ಪರ ಐವರು ಆಪ್ತರ ಉಚ್ಛಾಟನೆ

- Advertisement -
- Advertisement -

ಶಿವಮೊಗ್ಗ: ಪಕ್ಷದ ವಿರುದ್ಧ ಸದಾ ಹೇಳಿಕೆಗಳನ್ನು ನೀಡುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಐವರು ಆಪ್ತರನ್ನು ಶುಕ್ರವಾರ ಶಿವಮೊಗ್ಗ ಬಿಜೆಪಿ ಜಿಲ್ಲಾ ಘಟಕ ಉಚ್ಛಾಟಿಸಿದೆ.

ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ ಮೇಘರಾಜ್ ಅವರು ಐವರು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಐವರು ಆಪ್ತರಾದ ಬಿಜೆಪಿ ಹಿಂದುಳಿದ ವರ್ಗಗಳ ಸೊರಬ ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಎಂ.ಡಿ. ಉಮೇಶ್, ವೃತ್ತಿಕೊಪ್ಪ ಮಲ್ಲಿಕಾರ್ಜುನ್, ಗುರುಕುಮಾರ ಪಾಟೀಲ, ಆನವಟ್ಟಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವನಗೌಡ ಹಾಗೂ ಉದ್ರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಮೂರ್ತಿ ಅವರನ್ನು ಉಚ್ಛಾಟಿಸಿದ್ದಾರೆ.

- Advertisement -

Latest News

error: Content is protected !!