Wednesday, June 24, 2026
Homeಕರಾವಳಿಉಡುಪಿಗಂಗೊಳ್ಳಿಯಲ್ಲಿ ದೀಪಾವಳಿ ಪೂಜೆ ವೇಳೆ ಲಂಗರು ಹಾಕಿದ್ದ ಬೋಟ್ ನಲ್ಲಿ ಬೆಂಕಿ:ಏಳು ಬೋಟ್ ಗಳು ಬೆಂಕಿಗೆ...

ಗಂಗೊಳ್ಳಿಯಲ್ಲಿ ದೀಪಾವಳಿ ಪೂಜೆ ವೇಳೆ ಲಂಗರು ಹಾಕಿದ್ದ ಬೋಟ್ ನಲ್ಲಿ ಬೆಂಕಿ:ಏಳು ಬೋಟ್ ಗಳು ಬೆಂಕಿಗೆ ಆಹುತಿ

- Advertisement -
- Advertisement -

ಬೈಂದೂರು: ಲಂಗರು ಹಾಕಿದ್ದ ಬೋಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ಬೋಟ್ ಹೊತ್ತಿ ಉರಿದ ಘಟನೆ ಗಂಗೊಳ್ಳಿಯಲ್ಲಿ ಸಂಭವಿಸಿದೆ.

ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರು ಪರಿಸರದಲ್ಲಿ ಬೆಂಕಿ ಅನಾಹುತ ನಡೆದಿದ್ದು, ಅಕ್ಕ ಪಕ್ಕದ ಏಳು ಮೀನುಗಾರಿಕಾ ಬೋಟುಗಳು ಕೂಡಾ ಸುಟ್ಟು ಹೋಗಿವೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪೂಜೆ ನಡೆಯುತ್ತಿದ್ದ ವೇಳೆ ಬೆಂಕಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು, ಪಟಾಕಿ ಸಿಡಿದು ಬೆಂಕಿ ಹಬ್ಬಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ಮತ್ತು ರಕ್ಷಣಾ ಕಾರ್ಯಚರಣೆ ನಡೆದಿದೆ. ಅಗ್ನಿ ದುರಂತದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!