Monday, June 8, 2026
Homeತಾಜಾ ಸುದ್ದಿಜೈಲಿನಲ್ಲೂ ಚೈತ್ರಾ ಕುಂದಾಪುರಗೆ ಮುಗಿಯದ ಸಂಕಷ್ಟ ; ಪರಪ್ಪನ ಅಗ್ರಹಾರದಲ್ಲಿ ಕಾಳಿಕಾ ಛಾಯೆ ಮೇಲೆ ಹಲ್ಲೆ

ಜೈಲಿನಲ್ಲೂ ಚೈತ್ರಾ ಕುಂದಾಪುರಗೆ ಮುಗಿಯದ ಸಂಕಷ್ಟ ; ಪರಪ್ಪನ ಅಗ್ರಹಾರದಲ್ಲಿ ಕಾಳಿಕಾ ಛಾಯೆ ಮೇಲೆ ಹಲ್ಲೆ

- Advertisement -
- Advertisement -

ಬೆಂಗಳೂರು; MLA ಟಿಕೆಟ್ ಗಾಗಿ 5 ಕೋಟಿ ಡೀಲ್ ಪ್ರಕರಣದಲ್ಲಿ ಜೈಲು ಸೇರಿರುವ ಚೈತ್ರಾ ಕುಂದಾಪುರಗೆ ಜೈಲಿನಲ್ಲಿದ್ದರೂ ಸಂಕಷ್ಟ ಮಾತ್ರ ತಪ್ಪಿಲ್ಲ. ಪರಪ್ಪನ ಅಗ್ರಹಾರದಲ್ಲಿ ಚೈತ್ರಾ ಕುಂದಾಪುರ ಮೇಲೆ ಹಲ್ಲೆ ಮಾಡಲಾಗಿದೆ. ಮಹಿಳಾ‌ ವಿಚಾರಣಾಧೀನ ಕೈದಿಗಳ ಬ್ಯಾರಕ್‌ನಲ್ಲಿ ಆಫ್ರಿಕನ್ ಮಹಿಳಾ ಕೈದಿಗಳು ಚೈತ್ರಾ ಮೇಲೆ ಅಟ್ಯಾಕ್ ಮಾಡಿದ್ದಾರೆ.

ಭಾನುವಾರ ಮಧ್ಯಾಹ್ನ ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಮಹಿಳಾ ಕೈದಿಗಳು ಚೈತ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಚೈತ್ರಾ ಮೇಲೆ ಅಟ್ಯಾಕ್ ಮಾಡಿದ್ದಾರೆ ಆಫ್ರಿಕನ್ ಮಹಿಳಾ ಕೈದಿಗಳು . ಚೈತ್ರಾ ಮಾತ್ರವಲ್ಲದೇ ಆಕೆಯ ಜೊತೆಗಿದ್ದ ಮೂವರು ಸ್ಥಳೀಯ ಮಹಿಳಾ ಕೈದಿಗಳ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರಿಗೆ ಚೈತ್ರಾ ದೂರು ನೀಡಿದ್ದಾರೆ.

- Advertisement -

Latest News

error: Content is protected !!